ಬೆಂಗಳೂರು : ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರು ಇಂದು ಜೆಡಿಎಸ್ ಚಿಂತನ- ಮಂಥನ ಹೆಸರಿನಲ್ಲಿ ಬೆಂಗಳೂರಿನಲ್ಲಿ ಇಂದು ಸಭೆ ನಡೆಸಿದರು.
ಸಭೆ ನಡೆಸುತ್ತಿರುವ ಸ್ಥಳದಲ್ಲಿ ಫ್ಲೆಕ್ಸ್ ಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪೋಟೋ ಹಾಕಲಿಲ್ಲ, ಹಾಗೆಯೇ ವೇದಿಕೆ ಮೇಲೆ ಹಾಕಿರುವ ಬ್ಯಾನರ್ ನಲ್ಲೂ ಕುಮಾರಸ್ವಾಮಿ ಪೋಟೋಗೆ ಕಾಣೆಯಾಗಿದೆ. ಫೋಟೋಗೆ ಜಾಗ ನೀಡದೇ ಅಧ್ಯಕ್ಷರು ಸಭೆ ನಡೆಸುತ್ತಿದ್ದಾರೆ. ಆದರೆ ಬ್ಯಾನರ್ ನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಫೋಟೋವನ್ನು ಬಳಸಲಾಗಿದೆ. ಇದರಿಂದ ಸಿಎಂ ಇಬ್ರಾಹಿಂ ಅವರು ಕುಮಾರಸ್ವಾಮಿ ಅವರ ಮೇಲಿನ ಸಿಟ್ಟನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಅಸಮಾಧಾನಗೊಂಡಿರುವ ಹಲವಾರು ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇವರೊಂದಿಗೆ ಚರ್ಚೆ ನಡೆಸಿ ತಮ್ಮ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಅವರು ಈ ಹಿಂದೆನೇ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಈ ಸಭೆ ತುಂಬಾ ಮಹತ್ವ ಪಡೆದುಕೊಂಡಿದ್ದು, ಸಂಜೆಯ ವೇಳೆಗೆ ಸಿಎಂ ಇಬ್ರಾಹಿಂ ಅವರು ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.




