ಬೆಂಗಳೂರು : ಆಹಾರ, ನೀರು, ವಿದ್ಯುತ್ ಹಾಗೂ ನ್ಯಾಪ್ ಕಿನ್ ಗಳು ವ್ಯರ್ಥ ಮಾಡದಂತೆ ಬೆಂಗಳೂರಿನಲ್ಲಿರುವ ಎಲ್ಲಾ ಹೊಟೇಲ್ ಮಾಲೀಕರಿಗೆ ಪತ್ರ ಬರೆದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ಮನವಿ ಮಾಡಿದೆ.
ಹೊಟೇಲ್ ವೆಸ್ಟ್ ನಿಂದ ತ್ಯಾಜ್ಯ ಹೆಚ್ಚಳವಾಗುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳ ವ್ಯರ್ಥವಾಗುತ್ತಿದೆ ಆದ್ದರಿಂದ ಇವುಗಳ ಬಗ್ಗೆ ಕಾಳಜಿ ವಹಿಸಿ ಎಂದು ಹೊಟೇಲ್ ಮಾಲೀಕರಿಗೆ ಪತ್ರದ ಮೂಲಕ ಮನವಿ ಮಾಡಿದೆ.

ನಗರದಲ್ಲಿ ಈಗಾಗಲೇ 50% ರಷ್ಟು ಆಹಾರೋತ್ಪದನೆ ಕುಸಿದಿದೆ. ಈ ಕಾರಣ ವ್ಯರ್ಥವಾಗುತ್ತಿರೋ ಆಹಾರಕ್ಕೆ ಕಡಿವಾಣ ಹಾಕಬೇಕಾಗಿದೆ. ಹಾಗೆಯೇ ರಾಜ್ಯದಲ್ಲಿ ಈಗಾಗಲೇ ನೀರು ಮತ್ತು ವಿದ್ಯುತ್ ಅಭಾವ ಹೆಚ್ಚಾಗಿದೆ. ಆದ್ದರಿಂದ ಇವುಗಳನ್ನು ಅನಗತ್ಯವಾಗಿ ವ್ಯರ್ಥ ಮಾಡಬಾರದು, ವಿಶೇಷವಾಗಿ ಕಾವೇರಿ ನೀರಿನ ಹೋರಾಟದಲ್ಲಿ ನಮಗೆ ಬಹಳಷ್ಟು ವರ್ಷದಿಂದ ಹಿನ್ನೆಡೆಯಾಗುತ್ತಿದೆ, ಜೀವಜಲನ್ನು ಎಚ್ಚರಿಕೆಯಿಂದ ಉಪಯೋಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ನಮಲ್ಲಿ ನ್ಯಾಪ್ ಕಿನ್ ದುರುಪಯೋಗ ಆಗುತ್ತಿದ್ದು, ದಿನನಿತ್ಯ ಹತ್ತು ಟನ್ ಗಳಿಗಿಂತಲೂ ಹೆಚ್ಚು ನ್ಯಾಪ್ ಕಿನ್ ಬಳಕೆಯಾಗುತ್ತಿದೆ. ಇದರ ತಯಾರಿಕೆಗಾಗಿ ಬಹಳಷ್ಟು ಮರಗಳನ್ನು ಕಡಿಯಲಾಗುವುದು. ಆದ್ದರಿಂದ ಹೋಟೆಲ್ ನವರು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಆದ್ದರಿಂದ ಕೂಡಲೇ ಮಾಲೀಕರು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಅಸೋಸಿಯೇಷನ್ ಮನವಿ ಮಾಡಿದೆ. ಸಾರ್ವಜನಿಕರಿಗೆ ಮತ್ತು ಹೋಟೆಲ್ ನವರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಪೋಸ್ಟರ್ ಮತ್ತು ವಿಡಿಯೋವನ್ನು ಹಾಕಬೇಕು. ಕಾರ್ಮಿಕರಿಗೆ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ಮನವಿ ಮಾಡಿದ್ದಾರೆ.




