NO OPERATION KAMALA: ಬಿಜೆಪಿ ಯಾವುದೇ ಆಪರೇಷನ್ ಮಾಡಲ್ಲ: ಅವರ ಒಳಜಗಳದಲ್ಲೇ ಸರ್ಕಾರ ಬೀಳಲಿದೆ: ಅಶ್ವತ್ಥನಾರಾಯಣ

ಬೆಂಗಳೂರು : ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಜನ ಬಹುಮತ ನೀಡಿದ್ದಾರೆ. ಬಿಜೆಪಿಯಿಂದ ಆಪರೇಷನ್ ಮಾಡುವ ಯಾವುದೇ ಆಲೋಚನೆ ಇಲ್ಲ. ಅವರಲ್ಲಿರೋ ಗುಂಪುಗಳಿಂದಲೇ ಸರ್ಕಾರ ಬೀಳಬೇಕಷ್ಟೇ ಎಂದು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ, ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸರ್ಕಾರವನ್ನು ಬೀಳಿಸಬೇಕು, ಹೊರಗಿನಿಂದ ಯಾರೂ ಸರ್ಕಾರ ಬೀಳಿಸಲ್ಲ. ಬಿದ್ರೆ ಒಳ ಜಗಳದಲ್ಲೇ ಬೀಳಬೇಕು ಎಂದು ತಿಳಿಸಿದರು.

ನಾಲ್ಕು ಡಿಸಿಎಂ ಮಾಡಿ, ಅಭಿವೃದ್ಧಿ ಹಣ ಕೊಟ್ಟಿಲ್ಲ, ಅನುದಾನ ಕೊಡಿ ಹೀಗೆ ಕಿತ್ತಾಡುತ್ತಿದ್ದಾರೆ, ಈ ವಿಚಾರವನ್ನು ಡಿಕೆ ಶಿವಕುಮಾರ್ ಅವರು ಡೈವರ್ಟ್ ಮಾಡುತ್ತಿದ್ದಾರೆ. ಅವರು ಸೀಜನ್ ಪೊಲಿಟೀಶಿಯನ್. ಅವರು ಟೈಮ್ ಬಂದಾಗ ಒಳ್ಳೆಯ ಬಾಂಬ್ ಸಿಡಿಸುತ್ತಾರೆ ಎಂದರು.
135 ಜನ ಶಾಸಕರು ಇರುವಾಗ ಆಪರೇಷನ್ ಮಾಡಲು ಸಾಧ್ಯವಾ.? ಎಂದು ಪ್ರಶ್ನಿಸಿದ ಅವರು, ಸುಮ್ಮನೆ ದಿಕ್ಕು ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಆದರೆ, ಮಹಾರಾಷ್ಟ್ರದಲ್ಲಿ ನಡೆದ ರೀತಿಯಲ್ಲಿ ಇಲ್ಲೂ ನಡೆಯಬಹುದಲ್ಲಾ ಎಂಬ ಪ್ರಶ್ನೆ ಅವರು ಉತ್ತರಿಸಲು ನಿರಾಕರಿಸಿದರು.
ಐಟಿ ರೇಡ್ ಆಗಿದೆ. ತನಿಖೆ ಮಾಡಿಸಿ ಅಂದ್ರೆ, ಬಿಜೆಪಿಯವರದ್ದು, ಅವರದ್ದು, ಇವರದ್ದು ಅಂತಾರೆ, 92 ಕೋಟಿ ಹಣ ಯಾರದ್ದು ಅಂತ ಗೊತ್ತಾಗಬೇಕು. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದವರು ನೀವು, ವಿಚಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ವಯಸ್ಸಾಗಿದೆ ರಿಟೈರ್ಮೇಟ್ ತಗೊಂಡು ಮನೆಗೆ ಹೋಗಿ
NEP ರದ್ದು ಮಾಡಿ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದೀರಿ, ರಾಜ್ಯದ ಒಬ್ಬ ಮುಖ್ಯಮಂತ್ರಿ ಆಗಿದ್ದೀರಿ, ವಿದ್ಯಾರ್ಧಿಗಳ ಭವಿಷ್ಯ ಹಾಳು ಮಾಡಬೇಡಿ ಎಂದ ಅಶ್ವತ್ಥನಾರಾಯಣ, ಗಿಫ್ಟ್ ಕೊಟ್ಟ ವಾಚನ್ನು ಕೈಗೆ ಹಾಕಿಕೊಳ್ಳಬಹುದಾ ಅನ್ನೋ ವಿಚಾರ ನಿಮಗೆ ಗೊತ್ತಿಲ್ಲ, ವಯಸ್ಸಾಗಿಗೆ ರಿಟೈರ್ಮೆಂಟ್ ತಗೊಂಡು ಮನೆಗೆ ಹೋಗಿ ಎಂದರು.

ಹಣ ಎರಚಿದ ಸಚಿವ
ತೆಲಂಗಾಣದಲ್ಲಿ ಸಚಿವ ಶಿವಾನಂದ ಪಾಟೀಲ್, ಕವಾಲಿ ಕಾರ್ಯಕ್ರಮದಲ್ಲಿ ಹಣ ತುಳಿದು, ಹಣ ಎರಚಾಡಿದ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ, ಶಿವಾನಂದ ಪಾಟೀಲ್ ಕಾನೂನು ವಿರೋಧಿ ನಡೆ ತೋರಿಸಿದ್ದಾರೆ, ಶಿವಾನಂದ‌ ಪಾಟೀಲರನ್ನು ತಕ್ಷಣ ಬಂಧಿಸಲಿ ಎಂದು ಆಗ್ರಹಿಸಿದರು.
ತೆಲಂಗಾಣ ಸರ್ಕಾರದ ಶಿವಾನಂದ ಪಾಟೀಲ್ ವಿರುದ್ಧ ದೂರು ದಾಖಲಿಸಿ‌ ಬಂಧಿಸಲಿ, ರೈತರು ಬರದಲ್ಲಿ ಸಂಕಷ್ಟಲ್ಲಿರುವಾಗ ಒಬ್ಬ ಸಚಿವ ಹೀಗೆ ಹಣ ಎರಚಾಡೋದು ಎಷ್ಟು ಸರಿ?, ಇದು ಜನಪ್ರತಿನಿಧಿ ನಡೆದುಕೊಳ್ಳುವ ರೀತಿ ಅಲ್ಲ ಎಂದು ಅವರ ನಡೆಯನ್ನು ಖಂಡಿಸಿದರು.

More News