ಬೆಂಗಳೂರು : ಅತೀ ಎತ್ತರದ ಗೋಪುರದಿಂದ ಉದ್ಯಾನನಗರಿ ಬೆಂಗಳೂರಿನ ಸೌಂದರ್ಯ ಸವಿಯಲು ಸಾಧ್ಯವಾಗುವಂತಹ ಗೋಪುರವನ್ನು ಬೆಂಗಳೂರು ನಗರದಲ್ಲಿ ನಿರ್ಮಿಸುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪ್ರಸ್ತಾವನೆಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಸಿದ್ದಪಡಿಸಿದೆ. ಇದರ ಗ್ರಾಫಿಕ್ ವಿನ್ಯಾಸವನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ.
— DK Shivakumar (@DKShivakumar) October 17, 2023
ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ… pic.twitter.com/s153kRzlqo
ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ ಭೂಮಿಯನ್ನು ಗುರುತಿಸುವುದರ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವರು ಮೊದಲು ನಗರದಲ್ಲಿನ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಸರಿಪಡಿಸುವಂತೆ ಉಪಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ. ಹಾಗೆಯೇ ಇನ್ನು ಅನೇಕರು ಇದರಿಂದ ಬೆಂಗಳೂರಿನ ಬ್ರಾಂಡ್ ಮೌಲ್ಯ ವೃದ್ದಿಯಾಗುತ್ತದೆ ಎಂಬ ಮೆಚ್ಚುಗೆಯ ಮಾತನ್ನೂ ಆಡಿದ್ದಾರೆ.

ಇನ್ನು ಅನೇಕರು ಅತೀ ಎತ್ತರದ ಗೋಪುರದಲ್ಲಿ ನಿಂತು ಬೆಂಗಳೂರು ಕಸದ ರಾಶಿಯನ್ನು ನೋಡಬೇಕೇ, ಹಾಗೆಯೇ ಇನ್ನು ಕೆಲವರು ಇದಕ್ಕೆ ಹಣ ಖರ್ಚು ಮಾಡುವ ಬದಲು ಬೆಳ್ಳಂದೂರು ಕೆರೆ ಅಭಿವೃದ್ಧಿ ಮಾಡಿದರೆ, ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಕೀರ್ತಿ ಹೆಚ್ಚುತ್ತದೆ ಎಂದಿದ್ದಾರೆ.
ಕನಕಪುರಕ್ಕೆ ತೆರಳುವ ರಸ್ತೆ ಬಹಳ ಅಪಾಯಕಾರಿಯಾಗಿದ್ದು, ಚಾಲನೆ ಬಹಳ ಕಷ್ಟ, ಯಾವುದೇ ರೀತಿಯ ಸೂಚನಾ ಫಲಕಗಳಿಲ್ಲ, ದಯವಿಟ್ಟು ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದಿದ್ದಾರೆ.
ಈ ವಿನ್ಯಾಸ ನೋಡಲು ತುಂಬಾ ಚೆನ್ನಾಗಿದೆ. ನಗರದ ಸಂಚಾರ ದಟ್ಟಣೆ ಸರಿಪಡಿಸಿ, ಜನಸಾಮಾನ್ಯರಿಗೆ ಬೇಕಾಗಿರುವ ಶುದ್ಧ ಗಾಳಿ, ನೀರು, ಮತ್ತು ಸಾರಿಗೆ ವ್ಯವಸ್ಥೆ ಮಾಡಿ ಎಂದಿದ್ದಾರೆ.
ಇದೊಂದು ವಿಶ್ವದರ್ಜೆಯ ಗೋಪುರವಾಗಲಿದೆ, ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಈ ಗೋಪುರಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದುಬೈನ ಬುರ್ಜ್ ಖಲೀಫಾ 828 ಮೀಟರ್ ಎತ್ತರವಾಗಿದ್ದು, ಇದು ವಿಶ್ವದ ಅತೀ ಎತ್ತರದ ಗೋಪುರವಾಗಿದೆ. ಹಾಗೆಯೇ ಶಾಂಘೈನ ಶಾಂಘೈ ಟವರ್ 632 ಮೀಟರ್ ಎತ್ತರವಿದೆ. ನಮ್ಮ ಬೆಂಗಳೂರಿನ ಗೋಪುರ ಎಷ್ಟು ಎತ್ತರವಿರಲಿದೆ ಎಂಬ ಮಾಹಿತಿ ಇನ್ನು ಲಭ್ಯವಾಗಿಲ್ಲ.




