ನವದೆಹಲಿ : ಸೋಮವಾರ ಚೆನ್ನೈನಲ್ಲಿ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತಿತ್ತು. ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಅನ್ನು ಟೀಕಿಸಿರುವ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ, ಪಾಕ್ ಆಟಗಾರರ ಫಿಟ್ ನೆಸ್ ಬಗ್ಗೆ ಕಿಡಿಕಾರಿದ್ದಾರೆ.
https://x.com/asportstvpk/status/1716511510019866940?s=20
ಕೆಳ ಶ್ರೇಯಾಂಕದ ಅಫ್ಘಾನಿಸ್ತಾನದ ವಿರುದ್ಧ ಸೋತು ಸುಣ್ಣವಾಗಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನಕ್ಕೆ ಎಂಟು ಕೆಜೆ ಮಟನ್ ತಿಂತಾರೆ, ಫಿಟ್ ನೆಸ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ದದ ಸೋಲು ಮುಜುಗರವನ್ನುಂಟು ಮಾಡಿದೆ ಎಂದಿದ್ದೆ. ಎರಡು ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ 280ಕ್ಕೂ ಅಧಿಕ ರನ್ ಬೆನ್ನಟ್ಟಿರುವುದು ದೊಡ್ಡ ಸಾಧನೆಯೇ ಎಂದು ಎದುರಾಳಿ ತಂಡವನ್ನು ಕೊಂಡಾಡಿದ್ದಾರೆ.
ಪಾಕ್ ತಂಡದ ಕಳಪೆ ಫೀಲ್ಡಿಂಗ್ ಗಮನಿಸಿದರೆ ಅವರ ಫಿಟ್ ನೆಸ್ ಹೇಗಿತ್ತು ಎಂಬುದು ಅರಿಯಾಗುತ್ತದೆ. ಇವರು ಎರಡು ವರ್ಷಗಳಿಂದ ಫಿಟ್ ನೆಸ್ ಪರೀಕ್ಷೆ ಎದುರಿಸಿಲ್ಲ ಎಂದು ಹೇಳಿದ್ದಾರೆ. ಆಟಗಾರರ ವ್ಯಯಕ್ತಿಕ ಹೆಸರನ್ನು ತೆಗೆದುಕೊಂಡರೆ ಅದನ್ನು ಅವರು ಇಷ್ಟಪಡುವುದಿಲ್ಲ ಎಂದು ಹೇಳಿದ ಅವರು ಸ್ಪೋಟ್ಸ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವೃತ್ತಿಪರರಾಗಿ ನೀವು ನಿಮ್ಮ ದೇಶಕ್ಕಾಗಿ ಆಡುತ್ತಿದ್ದೀರಿ, ಪರೀಕ್ಷೆಗಳು ಇರಬೇಕು, ನಿಮಗೆ ದೇಶ ಸಂಬಳ ನೀಡುತ್ತದೆ, ನಾನು ಮಿಸ್ಬಾ ಜೊತೆಗಿದ್ದಾಗ ಅವರು ಈ ಮಾನದಂಡವನ್ನು ಹೊಂದಿದ್ದರು, ಆದ್ದರಿಂದ ಅವರನ್ನು ಆಟಗಾರರು ದ್ವೇಷಿಸುತ್ತಿದ್ದರು ಎಂದು ಹೇಳಿದ್ದಾರೆ. ಶುಕ್ರವಾರದಂದು ಪಾಕಿಸ್ತಾನ ತಂಡ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಅಲ್ಲಿಯೂ ಸೋತರೆ, ಅಲರ ಸೆಮಿಫೈನಲ್ ಪ್ರವೇಶ ಕಷ್ಟವಾಗಲಿದೆ.




