ಬೆಳಗಾವಿ :ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಂಪುಟದಲ್ಲಿ ಇದ್ದೇ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇಂತಹ ಸ್ಥಿತಿ, ಬೇರೆ ಯಾರಾದರೂ ಸಿಎಂ ಆದರೆ ಸತೀಶ್ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನಲ್ಲಿ ತೀವ್ರ ಬಂಡಾಯವಿದೆ ಎಂದಾಗ ನನ್ನನ್ನು ಕೆಲವರು ಟೀಕಿಸಿದ್ದರು. ಅವರಿಗೀಗ ವಾಸ್ತವ ಗೊತ್ತಾಗಿದೆ, ಸತೀಶ್ ಅವರ ನಡೆ ಮತ್ತು ಮಾತಿನಿಂದ ಉತ್ತರ ಸಿಕ್ಕಿದೆ ಎಂದರು. ಸತೀಶ್ ಜಾರಕಿಹೊಳಿಯವರು ಶಾಸಕರೊಂದಿಗೆ ಮೈಸೂರು ಪ್ರಯಾಣ ಬೆಳೆಸಿದ್ದೇ ಇದ್ದಕ್ಕೆಲ್ಲಾ ಕಾರಣ ಎಂದು ಹೇಳಿದ ಅವರು, ನಾನು ಅಲ್ಲಿದ್ದಾಗ ನನಗೂ ಅದೇ ರೀತಿಯಲ್ಲಿ ಹಿಂಸೆಯಾಗುತ್ತಿತ್ತು ಎಂದು ಹೇಳಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ, ಅವರ ಮಾತಿನ ದರ್ಪ, ದಕ್ಷತೆ ಈಗ ಕಾಣುತ್ತಿಲ್ಲ ಎಂದು ಆರೋಪಿದ ಅವರು, ಅವರು ಯಾಕೆ ಸೈಲೆಂಟ್ ಆಗಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಆದರೂ ಅವರಿಗೆ ಈದ ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಈ ಹಿಂದೆ ಅನೇಕ ಸಲ ಭೇಟಿ ಮಾಡಿದ್ದೇನೆ, ಅಂದು ಸುದ್ದಿಯಾಗಲಿಲ್ಲ, ಈ ಸಲ ಮಾತ್ರ ಅವರ ಭೇಟಿ ವಿಚಾರ ಬಹಿರಂಗಗೊಂಡಿದೆ ಎಂದು ಹೇಳಿದ ಅವರು, ಅವರ ಭೇಟಿ ಸಂದರ್ಭದಲ್ಲಿ ರಾಜಕೀಯ ಚರ್ಚೆಯಾಗಿಲ್ಲ, ವೈಯಕ್ತಿಕ ವಿಚಾರವಷ್ಟೇ ಚರ್ಚೆ ನಡೆಸಿದ್ದೇವೆ ಎಂದರು.
I GOT ANSWER FROM SATISH JARKIHOLI: ಅಂದಿನ ನನ್ನ ಬಂಡಾಯಕ್ಕೆ ಸತೀಶ್ ಮೂಲಕ ಉತ್ತರ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ ಅವರ ದರ್ಪ, ದಕ್ಷಣೆ ಈಗಿಲ್ಲ: ರಮೇಶ್ ಜಾರಕಿಹೊಳಿ
ಬೆಳಗಾವಿ :ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಂಪುಟದಲ್ಲಿ ಇದ್ದೇ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಿಂಸೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇಂತಹ ಸ್ಥಿತಿ, ಬೇರೆ ಯಾರಾದರೂ ಸಿಎಂ ಆದರೆ ಸತೀಶ್ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಶಾಸಕ ರಮೇಶ್ ಜಾರಕಿಹೊಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನಲ್ಲಿ ತೀವ್ರ ಬಂಡಾಯವಿದೆ ಎಂದಾಗ ನನ್ನನ್ನು ಕೆಲವರು ಟೀಕಿಸಿದ್ದರು. ಅವರಿಗೀಗ ವಾಸ್ತವ ಗೊತ್ತಾಗಿದೆ, ಸತೀಶ್ ಅವರ ನಡೆ ಮತ್ತು ಮಾತಿನಿಂದ ಉತ್ತರ ಸಿಕ್ಕಿದೆ ಎಂದರು.
ಸತೀಶ್ ಜಾರಕಿಹೊಳಿಯವರು ಶಾಸಕರೊಂದಿಗೆ ಮೈಸೂರು ಪ್ರಯಾಣ ಬೆಳೆಸಿದ್ದೇ ಇದ್ದಕ್ಕೆಲ್ಲಾ ಕಾರಣ ಎಂದು ಹೇಳಿದ ಅವರು, ನಾನು ಅಲ್ಲಿದ್ದಾಗ ನನಗೂ ಅದೇ ರೀತಿಯಲ್ಲಿ ಹಿಂಸೆಯಾಗುತ್ತಿತ್ತು ಎಂದು ಹೇಳಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ, ಅವರ ಮಾತಿನ ದರ್ಪ, ದಕ್ಷತೆ ಈಗ ಕಾಣುತ್ತಿಲ್ಲ ಎಂದು ಆರೋಪಿದ ಅವರು, ಅವರು ಯಾಕೆ ಸೈಲೆಂಟ್ ಆಗಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಆದರೂ ಅವರಿಗೆ ಈದ ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಈ ಹಿಂದೆ ಅನೇಕ ಸಲ ಭೇಟಿ ಮಾಡಿದ್ದೇನೆ, ಅಂದು ಸುದ್ದಿಯಾಗಲಿಲ್ಲ, ಈ ಸಲ ಮಾತ್ರ ಅವರ ಭೇಟಿ ವಿಚಾರ ಬಹಿರಂಗಗೊಂಡಿದೆ ಎಂದು ಹೇಳಿದ ಅವರು, ಅವರ ಭೇಟಿ ಸಂದರ್ಭದಲ್ಲಿ ರಾಜಕೀಯ ಚರ್ಚೆಯಾಗಿಲ್ಲ, ವೈಯಕ್ತಿಕ ವಿಚಾರವಷ್ಟೇ ಚರ್ಚೆ ನಡೆಸಿದ್ದೇವೆ ಎಂದರು.
More News
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು? ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’ ಇದೇ ಮಾರ್ಚ್ 9 ರಿಂದ ಜೀ಼ ಕನ್ನಡ ವಾಹಿನಿಯಲ್ಲಿ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಬೇಟಿ ಮಾಡಿದ ಸಚಿವರ ನಿಯೋಗ
ಜಿಯೋ ಹಾಟ್ಸ್ಟಾರ್ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ “ಕ್ಷೇತ್ರಪತಿ”
ʻನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ನಂದಕುಮಾರ್ ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು?
ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಹಾಗು ಎಂಎಲ್ಸಿ ಜಕ್ಕಪ್ಪನವರ ನಡುವೆ ವಾಗ್ವಾದ