ಗೋವಾ: ಬಿಜೆಪಿ- ಜೆಡಿಎಸ್ ಮೈತ್ರಿ ಕುರಿತ ಗೊಂದಲಗಳ ಪರಿಹಾರಕ್ಕೆ ಬಿಜೆಪಿ ವರಿಷ್ಠರ ಭೇಟಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮುಂದಾಗಿದ್ದು, ಇದೀಗ ಗೋವಾ ಸಿಎಂರನ್ನು ಭೇಟಿಯಾಗಿದ್ದಾರೆ.

ಗೋವಾದ ಪಣಜಿಯಲ್ಲಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಹೆಡಿ ಕುಮಾರಸ್ವಾಮಿಯೊಂದಿಗೆ ಪುತ್ರ ನಿಖಿಲ್ ಕುಮಾರಸ್ವಾಮಿ ಇದ್ದರು. ಈ ಹಿಂದೆ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರರನ್ನು ಕರೆದುಕೊಂಡು ಹೋಗಿದ್ದರು. ಇದೀಗ ಮತ್ತೆ ಪುತ್ರರೊಬ್ಬರನ್ನೇ ಕರೆದುಕೊಂಡು ಹೋಗಿದ್ದಾರೆ. ಬೇರೆ ಯಾವುದೇ ಜೆಡಿಎಸ್ ಮುಖಂಡರಾಗಲಿ, ಶಾಸಕರಾಗಲಿ ಅವರೊಂದಿಗೆ ಇರಲಿಲ್ಲ.

ಮೈತ್ರಿ ಕುರಿತು ಎರಡನೇ ಸುತ್ತಿನ ಮಾತುಕತೆಗೆ ಮುಂದಾಗಿರುವ ಕುಮಾರಸ್ವಾಮಿ, ಬಿಜೆಪಿ ವರಿಷ್ಠರ ಭೇಟಿಗೆ ಕಾಯುತ್ತಿದ್ದಾರೆ ಎನ್ನಲಾಗಿದೆ. ಮೊದಲ ಬಾರಿಯ ಭೇಟಿ ವೇಳೆ ಪ್ರಮೋದ್ ಸಾವಂತ್ ಮೂಲಕ ಬಿಜೆಪಿ ರಾಷ್ಟ್ರೀಯ ನಾಯಕರ ಭೇಟಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ, ಇದೀಗ ಎರಡನೇ ಬಾರಿಯೂ ಅವರ ಭೇಟಿ ಮಾಡಿದ್ದಾರೆ.




