ONION PRICE MAY GO UP..!: ಮತ್ತೆ ಕಣ್ಣೀರು ತರಿಸಲಿದೆಯಾ ಈರುಳ್ಳಿ ಬೆಲೆ ..? ಕೆಜಿಯೊಂದಕ್ಕೆ 100 ರೂ ದಾಟುವ ಸಂಭವ ..!

ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ, ಬೆಳೆ ಹಾನಿ ಹಾಗೂ ಬೇಡಿಕೆಯಷ್ಟು ಈರುಳ್ಳಿ ಪೂರೈಕೆಯಾಗದೇ ಇದ್ದ ಕಾರಣ ಈರುಳ್ಳಿ ಚಿಲ್ಲರೆ ವ್ಯಾಪಾರ ದರ ಪ್ರತಿ ಕೆಜಿಗೆ ನೂರು ರೂಪಾಯಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಸದ್ಯ ಕೆಜಿಯೊಂದಕ್ಕೆ 70 ರೂಪಾಯಿನಷ್ಟಿರುವ ಬೆಲೆ, ಬೇಡಿಕೆ ಹೀಗೆಯೇ ಮುಂದುವರೆದರೆ ಕೆಜಿಗೆ ನೂರರ ಗಡಿ ದಾಟುವ ಸಂಭವ ಹೆಚ್ಚಾಗಿದೆ.
ರಾಜ್ಯದಲ್ಲಿ ಮಳೆ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ, ಇನ್ನು ಅನೇಕ ಕಡೆಗಳಲ್ಲಿ ಬೆಳೆ ನಾಶವೇ ಈರುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಹದಿನೈದು ದಿನಗಳಿಂದಲೂ ಪ್ರತಿದಿನ ಈರುಳ್ಳಿ ಬೆಲೆ ಏರಿಕೆ ಕಾಣುತ್ತಿದ್ದು, ಬೇಡಿಕೆಯಷ್ಟು ಈರುಳ್ಳಿ ಸರಬರಾಜು ಆಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತಿದ್ದ ಈರುಳ್ಳಿ ಕಡಿಮೆಯಾಗಿದ್ದು, ಇದಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಪರಿಸ್ಥಿತಿ ಹೀಗಿಯೇ ಮುಂದುವರೆದರೆ ಮುಂಬರುವ ದಿನಗಳಲ್ಲಿ ಈರುಳ್ಳಿ ನೂರರ ಗಡಿ ದಾಟುವುದರಲ್ಲಿ ಸಂಶಯವಿಲ್ಲ.

More News