ಬೆಂಗಳೂರು: ಬಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ಟೈಗರ್ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಟೈಗರ್ -3 ಮುಂಬರುವ ಸೆಪ್ಟಂಬರ್ 12 ಕ್ಕೆ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನಾ ಸಿನೆಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಕೇವಲ 5 ಸೆಕಂಡಿನ ಟವಲ್ ಫೈಟ್ ಅಭಿಮಾನಿಗಳನ್ನು ಹುಚ್ಚೇಬ್ಬಿಸಿದೆ.
ರಂಜಾನ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಟರ್ಕಿ, ಆಸ್ಚ್ರೀಯಾ, ರಷ್ಯಾ ಮುಂತಾದ ದೇಶಗಳಲ್ಲಿ ಟೈಗರ್ -3 ಚಿತ್ರವನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ.

ರಾ ಎಜೆಂಟ್ ಆಗಿ ಸಲ್ಮಾನ್ ಖಾನ್, ಅವಿನಾಶ್ ಸಿಂಗ್ ರಾಥೋಡ್ ಆಗಿ ನಟಿಸಿದ್ದಾರೆ. ಅದೇ ರೀತಿಯಲ್ಲಿ ಝೋಯಾ ಪಾತ್ರದಲ್ಲಿ ಕತ್ರಿನಾ ಕೈಫ್ ನಟಿಸಿದ್ದಾರೆ. ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಕತ್ರಿನಾ ಕೈಫ್ ಅವರ ಟವಲ್ ಫೈಟ್ ಗೆ ಫಿದಾ ಆಗಿದ್ದಾರೆ.

ರೊಮ್ಯಾನ್ಸ್ ಸೀನ್ ಗಳಲ್ಲಿ ಮೈಚಳಿ ಬಿಟ್ಟು ನಟಿಸಿದಂತೆಯೇ ಕತ್ರಿನಾ ಕೈಫ್ ಆ್ಯಕ್ಷನ್ ಪಾತ್ರಕ್ಕೂ ಜೀವ ತುಂಬಿದ್ದಾರೆ. ಒಂದು ಪುಟ್ಟ ಟವಲ್ ಧರಿಸಿ ಕತ್ರಿನಾ ಕೈಫ್ ಅವರು ಇನ್ನೊರ್ವ ಯುವತಿಯ ಜತೆ ಮಾಡಿದ ಫೈಟಿಂಗ್ ದೃಶ್ಯ ಅದ್ಭುತವಾಗಿದೆ. ಇಬ್ಬರು ಒಂದು ಟವಲ್ ಗಾಗಿ ಎಳೆದಾಡಿಕೊಂಡಿದ್ದಾರೆ. ಇಬ್ಬರಲ್ಲಿ ಯಾರಿಗೆ ಟವಲ್ ಸಿಕ್ಕಿದೆ ಎನ್ನುವುದಕ್ಕೆ ಸಿನೆಮಾ ನೋಡಬೇಕಷ್ಟೇ.


ಒಟ್ಟಾರೆಯಾಗಿ ಕತ್ರಿನಾ ಕೈಫ್ ಅವರ ವಿಭಿನ್ನ ರೀತಿಯ ಆ್ಯಕ್ಷನ್ ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಿದೆ. ಇಮ್ರಾನ್ ಹಶ್ಮಿ ಟೈಗರ್ -3 ಚಿತ್ರದಲ್ಲಿ ವಿಲನ್ ಆಗಿ ನಡೆಸಿದ್ದಾರೆ. ಹಾಗೆಯೇ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಆದಿತ್ಯ ಚೋಪ್ರಾ ಕಥೆ ಬರೆದಿದ್ದಾರೆ. ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.




