Clash for lunch at Congress meeting: ಕಾಂಗ್ರೆಸ್ ಸಭೆಯಲ್ಲಿ ಊಟಕ್ಕೂ ಸರ್ಕಸ್: ಅಶಿಸ್ತು ಮನೆಯ ದೇವರು..!

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೆ ಪಕ್ಷದಲ್ಲಿ ಶಿಸ್ತು ಮಾತ್ರ ಸ್ವಲ್ಪವೂ ಬದಲಾಗಿಲ್ಲ. ಇದಕ್ಕೆ ಸಾಕ್ಷಿ ಎಂಬುವಂತೇ ಕಾಂಗ್ರೆಸ್ ಪಕ್ಷದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಊಟಕ್ಕೆ ಕಾರ್ಯಕರ್ತರು ಮಾಡಿದ ನೂಕಾಟ ನೋಡಿದರೇ ಅರ್ಥವಾಗುತ್ತದೆ.

https://youtu.be/mh1lFsydV6w

ಹೌದು.. ಸಭೆಯಲ್ಲಿ ಊಟಕ್ಕಾಗಿ ನೂಕಾಟ, ನಳ್ಳಾಟ ನೋಡಿದರೇ ಅವ್ಯವಸ್ಥೆ ಆಗಾರವಾದ ಪ್ರಗತಿ ಪರಿಶೀಲನೆ ಎಂಬುವಂತಾಗಿದೆ. ಸರಿಯಾದ ರೀತಿಯ ವ್ಯವಸ್ಥೆ ಇಲ್ಲದೆ ಊಟದ ಪ್ಲೇಟ್‌ಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹರಸಾಹಸ ಮಾಡುವಂತಾಗಿದೆ.

ಇನ್ನೂ‌ ಧಾರವಾಡ ಜಿಲ್ಲಾ ನಗರ ಹಾಗೂ ಗ್ರಾಮಿಣ ಅಧ್ಯಕ್ಷರ ಉಸ್ತುವಾರಿಯಲ್ಲಿ ನಡೆದ ಸಭೆಯಲ್ಲಿಯೇ ಇಂತಹದೊಂದು ಅವ್ಯವಸ್ಥೆ ಉಂಟಾಗಿದ್ದು, ಗ್ರಾಮೀಣ ಭಾಗದಿಂದ ಬಂದ ಕಾರ್ಯಕರ್ತರ ಹಿಡಿ ಶಾಪ ಹಾಕಿದ್ದಾರೆ.

More News