ಲಾಹೋರ್ : ಪಾಕಿಸ್ತಾನ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ರಾಜೀನಾಮೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ತಂಡದ ಕೆಲವು ಆಟಗಾರರನ್ನು ನಿರ್ವಹಿಸುತ್ತಿರುವ ಕಂಪನಿಯ ಜತೆ ಇಂಜಮಾಮ್ ಅವರು ಸಖ್ಯ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಪಾಕ್ ಕ್ರಿಕೆಟ್ ಮಂಡಳಿ ತನಿಖೆಗೆ ಸೂಚಿಸಿದ ಬೆನ್ನಲ್ಲೇ ಇಂಜಮಾಮ್ ಉಲ್ ಹಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಾಕ್ ಕ್ರಿಕೆಟ್ ತಂಡ ನಾಯಕ ಬಾಬರ್ ಅಜಂ, ವೇಗಿ ಶಾಹೀನ್ ಶಾ ಆಫ್ರೀದಿ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ನಿರ್ವಹಿಸುತ್ತಿರುವ ಯಾಝಾ ಇಂಟರ್ ನ್ಯಾಷನಲ್ ಎಂಬ ಹೆಸರಿನ ಕಂಪನಿಯ ಏಜೆಂಟ್ ಕೂಡ ಜೊತೆ ಇಂಜಮಾಮ್ ಅವರಿಗೂ ಏಜೆಂಟ್ ಆಗಿರುವ ಹಿನ್ನೆಲೆಯಲ್ಲಿ ಪಾಕ್ ಕ್ರಿಕೆಟ್ ಮಂಡಳಿ ತನಿಖೆಗೆ ಐವರು ಸದಸ್ಯರ ಸಮಿತಿಯನ್ನು ರಚಿಸಿ, ತನಿಖೆಗೆ ಆದೇಶ ನೀಡಿತ್ತು.
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಮಧ್ಯದಲ್ಲೇ ಇಂಜಮಾಮ್ ಅವರು ರಾಜೀನಾಮೆ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಕತಾಳೀಯ ಎಂಬಂತೆ ಪಾಕ್ ಕ್ರಿಕೆಟಿಗರು ವಿಶ್ವಕಪ್ ನಲ್ಲಿನ ಪ್ರದರ್ಶನ ಕೂಡ ಅಷ್ಟೇನು ಆಶಾದಾಯಕವಾಗಿಲ್ಲ.