Kannada Rajyotsav Celebration: ಹುಬ್ಬಳ್ಳಿಯಲ್ಲಿ ರಾಜ್ಯೋತ್ಸವ ಆಚರಣೆ: ಅದ್ದೂರಿ ಮೆರವಣಿಗೆಯೊಂದಿಗೆ ಸಂಭ್ರಮ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ವಾಣಿಜ್ಯನಗರಿಯಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಪ್ರಸಾದ್ ಅಬ್ಬಯ್ಯ ಅವರು, ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಶ್ರೀ ಸಿದ್ದಾರೂಢ ಮಠದ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವದ ಆಚರಣೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

ಕನ್ನಡ ನಾಡಿನ ಕುರಿತು ಮಹತ್ವ ಸಾರಿದ ಶಾಸಕರು, ಗಣ್ಯರು, ಕನ್ನಡ ನಾಡು, ಭಾಷೆ ಜಲ ಏಕೀಕರಣದ ಮಹತ್ವ ಸಾರುವ ಸ್ಥಬ್ದ ಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ವಿವಿಧ ಕಲಾತಂಡಗಳ ಮೆರವಣಿಗೆಗೆ ಚಾಲನೆ ದೊರೆಯಿತು.

ಇನ್ನೂ ಶ್ರೀ ಸಿದ್ಧಾರೂಢ ಮಠದಿಂದ ನೆಹರು ಮೈದಾನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು,
ಪಾಲಿಕೆ ಮೇಯರ್ ವೀಣಾ ಬಾರದ್ವಾಡ್, ಆಯುಕ್ತ ಈಶ್ವರ ಉಳ್ಳಾಗಡ್ಡಿ ಮುಂತಾದವರು ಭಾಗಿಯಾಗಿದ್ದರು.

More News