HAPPY BIRTHDAY SHARUKH KHAN: ಬಾಲಿವುಡ್ ಬಾದ್ ಶಾ ಮನೆ ಮುಂದೆ ಅಭಿಮಾನಿಗಳ ದಂಡು: ನಿಮ್ಮ ಪ್ರೀತಿಯ ಕನಸಿನಲ್ಲಿ ಬದುಕುತ್ತಿದ್ದೇನೆ ಎಂದ ಶಾರುಕ್

ಮುಂಬೈ: ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಇಂದು ತಮ್ಮ 58 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ರಾತ್ರಿಯೇ ತಮ್ಮ ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಮಧ್ಯರಾತ್ರಿ ಸುಮಾರು 12 ಗಂಟೆಗೆ ಶಾರುಕ್ ಅವರಿಗೆ ಶುಭಕೋರಿದರು.

ತಮ್ಮ ಮನೆಯಿಂದ ಹೊರಬಂದು ಬಾಲ್ಕನಿಯಲ್ಲಿ ನಿಂತ ಶಾರುಕ್ ಅವರು ಕಪ್ಪು ಬಣ್ಣದ ಉಡುಪು ಧರಿಸಿದ್ದರು. ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಕೈಬೀಸಿ, ಹರ್ಷ ವ್ಯಕ್ತಪಡಿಸಿದರಲ್ಲದೆ, ಅಭಿಮಾನಿಗಳ ಶುಭಹಾರೈಕೆಯನ್ನು ಸ್ವೀಕರಿಸಿದರು.
ತಮ್ಮ ಅಭಿಮಾನಿಗಳ ಶುಭಹಾರೈಕೆಗೆ ಟ್ವೀಟರ್ ಖಾತೆಯಲ್ಲಿ ತಮ್ಮ ಸಂಸವನ್ನು ವ್ಯಕ್ತಪಡಿಸಿರುವ ಶಾರುಕ್, ತಡರಾತ್ರಿ ನಮ್ಮ ಮನೆಗೆ ಬಂದು ಶುಭಹಾರೈಸುತ್ತಿರುವುದು ನಂಬಲಸಾಧ್ಯ. ನಾನೊಬ್ಬ ಕೇವಲ ನಟ. ನಾನು ನಿಮಗೆ ಸ್ವಲ್ಪ ಮಟ್ಟಿಗೆ ಮನರಂಜಿಸಿರಬಹುದು.

ನಾನು ನಿಮ್ಮ ಪ್ರೀತಿಯ ಕನಸಿನಲ್ಲಿ ಬದುಕುತ್ತಿದ್ದೇನೆ. ನಿಮ್ಮೆಲ್ಲರನ್ನು ರಂಜಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು, ಬೆಳಗ್ಗೆ ಸಿಗೋಣ ಎಂದು ಶಾರುಕ್ ತಮ್ಮ ಮನದಾಳದ ಮಾತುಗಳನ್ನು ಅಪ್ ಲೋಡ್ ಮಾಡಿದ್ದಾರೆ.
ನಟ ಶಾರುಕ್ ಖಾನ್ ಅವರ ಡಂಕಿ, ಟೈಗರ್ -3, ದಿ ಆರ್ಚೀಸ್ ಚಿತ್ರಗಳು ಬಿಡುಗಡೆಗೆ ಸಿದ್ದವಾಗುತ್ತಿವೆ.

More News