ಮುಂಬೈ: ವಿಚಿತ್ರ, ವಿಚಿತ್ರ ಉಡುಗೆ ತೊಟ್ಟು ಮೈ ಮಾಟ ಪ್ರದರ್ಶಿಸಿ ಖ್ಯಾತಿ ಪಡೆದಿರುವ ಮಾಡೆಲ್ ಉರ್ಫಿ ಜಾವೇದ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಮುಂಬೈ ಪೊಲೀಸರು ಮಾತ್ರ ಯಾವುದೇ ಹೇಳಿಕೆ ನೀಡಿಲ್ಲ. ಈ ಸುದ್ದಿಯನ್ನು ಅಲ್ಲಗಳೆದು ಇಲ್ಲ.
ತುಂಡುಡುಗೆ ಧರಿಸಿ ಸಾರ್ವಜನಿಕವಾಗಿ ಓಡಾಡಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. VIRALBHAYANI ಎನ್ನುವ ಇನ್ನಸ್ಟಾಗ್ರಾಮ್ ಖಾತೆಯಲ್ಲಿ ಉರ್ಫಿಯನ್ನು ಪೊಲೀಸರು ಕರೆದೊಯ್ದ ವ ವಿಡಿಯೋವೊಂದನ್ನು ಶೇರ್ ಮಾಡಲಾಗಿದೆ.
ಆಕೆಯನ್ನು ಪೊಲೀಸರು ಕರೆದೊಯ್ಯುವಾಗ ಯಾಕೆ ನನ್ನನ್ನು ಕರೆದೊಯ್ಯುತ್ತೀರಿ ಎಂದು ಪ್ರಶಅನಿಸಿದಾಗ , ಅದಕ್ಕೆ ಪೊಲೀಸರು ಇಷ್ಟು ಸಣ್ಣ ಬಟ್ಟೆಯನ್ನು ಯಾರು ಧರಿಸುತ್ತಾರೆ ಎಂದು ಹೇಳಿ ಜೀಪ್ ಹತ್ತಿಸಿಕೊಂಡಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದೆ.
ಇಬ್ಬರು ಮಹಿಳಆ ಪೊಲೀಸರು ಉರ್ಫಿ ಅವರನ್ನು ಜೀಪ್ ಗೆ ಹತ್ತಿಸಿಕೊಂಡು ಹೋದ ದೃಶ್ಯ ತೀವ್ರ ವೈರಲ್ ಆಗಿದೆ.




