KANGANA RANAUT EXPRESSED HER POLITICAL INTEREST: ಕೃಷ್ಣಾನುಗ್ರಹವಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ : ನಟಿ ಕಂಗನಾ ರಣಾವತ್

ದ್ವಾರಕಾ : ನನಗೆ ಕೃಷ್ಣಾನುಗೃಹ ಒಂದು ಇದ್ದರೆ ಸಾಕು ನಾನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳುವುದರ ಮೂಲಕ ಚುನಾವಣಾ ರಂಗಕ್ಕೆ ಪ್ರವೇಶಿಸುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯ ಶ್ರೀಕೃಷ್ಣನ ಪ್ರಸಿದ್ದ ದ್ವಾರಕಾಧೀಶ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕೃಷ್ಣನ ಆಶೀರ್ವಾದ ಮಾಡಿದ ನಾನು ಹೋರಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ, ಯಾವ ಕ್ಷೇತ್ರದಿಂದ ಯಾವ ಪಕ್ಷದಿಂದ ಚುನಾವಣಾ ಕಣದಲ್ಲಿರುವುದು ಮಾತ್ರ ಅವರು ಬಹಿರಂಗಪಡಿಸಲಿಲ್ಲ.

600 ವರ್ಷಗಳ ಹೋರಾಟದ ನಂತರ ಭಾರತೀಯರಾದ ನಾವು ಈ ದಿನಗಾಗಿ ಕಾಯುತ್ತಿದ್ದೇವೆ. ಅತ್ಯಂತ ಸಂಭ್ರಮದಿಂದ ದೇವಾಲಯವನ್ನು ಸ್ಥಾಪಿಸುತ್ತಿದ್ದೇವೆ. ಸನಾತನ ಧರ್ಮದ ಧ್ವಜವು ಪ್ರಪಂಚದಾದ್ಯಂತ ಹಾಕಬೇಕು ಎಂದು ಅವರು ಹೇಳುವುದರ ಮೂಲಕ ಬಿಜೆಪಿ ಸರ್ಕಾರವನ್ನು ಶ್ಲಾಘಿಸಿದರು.
ದ್ವಾರಕಾ ನಗರದ ಅವಶೇಷಗಳು ಸಮುದ್ರದಡಿಯಲ್ಲಿವೆ. ಅವುಗಳನ್ನು ನೋಡಲು ಯಾತ್ರಾರ್ಥಿಗಳಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ದ್ವಾರಕಾ ದಿವ್ಯನಗರಿ, ಅದ್ಭುತನಗರಿ, ದ್ವಾರಕಾಧೀಶ ಪ್ರತಿ ಕಣದಲ್ಲಿಯೂ ಇದ್ದಾನೆ. ದೇವರ ದರ್ಶನ ಪಡೆಯಲು ಇಲ್ಲಿಗೆ ಬರುತ್ತಿರುತ್ತೇನೆ ಎಂದರು.

More News

You cannot copy content of this page