ಬೆಂಗಳೂರು : ಸಿಎಂ ಮತ್ತು ಡಿಸಿಎಂ ಇಬ್ಬರೂ ಒಳಗೊಳಗೆ ಹೊಂದಿದ್ದ ಅಸಮಾಧಾನವನ್ನು ಇಂದು ಕೆಲ ಹೊತ್ತು ಮರೆತಂತೆ ಕಾಣುತ್ತಿತ್ತು. ಸಿಎಂ ಜೊತೆಗಿನ ಮುನಿಸು ಮರೆತ ಡಿಸಿಎಂ ಡಿ ಕೆ ಶಿವಕುಮಾರ್, ಕಾವೇರಿ ನಿವಾಸದಲ್ಲಿ ನೂತನ ಕಾನ್ಫರೆನ್ಸ್ ಹಾಲ್ ಅನ್ನು ಉದ್ಘಾಟನೆ ಮಾಡಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರ ಕೈಯಿಂದ ಉದ್ಘಾಟನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ ಅವರು, ತಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ ಎಂಬ ಸಂದೇಶ ರವಾನೆಗೆ ಮುಂದಾದರು. ಪಕ್ಷದಲ್ಲಿನ ಭಿನ್ನಾಭಿಪ್ರಾಯ ಚರ್ಚಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದರು. ಈ ಸಭೆಯಲ್ಲಿ 16 ಸಚಿವರನ್ನು ಕರೆಯಲಾಗಿತ್ತು. ಉಳಿದ 16 ಸಚಿವರನ್ನು ಮುಂದಿನ ವಾರ ಕರೆಯಲಾಗುವುದು ಎಂದು ತಿಳಿಸಿದ್ದಾರೆ.

ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ರಾಜಕೀಯ, ನಿಗಮ ಮಂಡಳಿ, ಸಿಎಂ ವಿಚಾರಗಳು ಚರ್ಚೆಗೆ ಬಂದಿವೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅಧ್ಯಕ್ಷರ ಕೈಯಿಂದ ಉದ್ಘಾಟನೆ ಆದ್ರೆ ಪಕ್ಷಕ್ಕೆ ಒಳ್ಳೆಯದು ಎಂದು ಸಚಿವ ಪರಮೇಶ್ವರ್ ತಿಳಿಸಿದರು.

ಈ ವೇಳೆ ಕೆ ಎನ್ ರಾಜಣ್ಣ ಎಲ್ಲಿ ಅಂತ ಕರೆದ ಡಿಕೆ ಶಿವಕುಮಾರ್, ನಿನ್ನೆ ನೀವು ಸಿಎಂ ಆಗಲಿ ಅಂತ ಹೇಳಿಕೆ ನೀಡಿದ್ದಾರೆ ಎಂದು ಪರಮೇಶ್ವರ ಕಾಲೆಳೆದ ಡಿಸಿಎಂ ಡಿ ಕೆ ಶಿವಕುಮಾರ್, ಕೊನೆಗೆ ಚಪ್ಪಾಳೆ ಹೊಡೆಯಿರಿ ಅಂತ ಹೇಳಿ ಕಾನ್ಫರೆನ್ಸ್ ಹಾಲ್ ಉದ್ಘಾಟನೆಯನ್ನು ಸಿಎಂ ಪಕ್ಷದ ಅಧ್ಯ.ಕ್ಷರಿಂದಲೇ ಮಾಡಿಸಿದರು.