HARDIK PANDYA NOT PLAYING WORLDCUP: ಏಕದಿನ ಕ್ರಿಕೆಟ್ ವಿಶ್ವಕಪ್: ಗಾಯಾಳು ಹಾರ್ದಿಕ್ ಪಾಂಡ್ಯ ಹೊರಕ್ಕೆ: ಕೆ ಎಲ್ ರಾಹುಲ್ ಉಪನಾಯಕ

ನವದೆಹಲಿ : ಕಾಲಿನ ಗಾಯದಿಂದಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕೆ ಎಲ್ ರಾಹುಲ್ ಅವರನ್ನು ಉಪನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯ ಹೇಳಿಕೆಯನ್ನು ಆಂಗ್ಲ ಪತ್ರಿಕೆಯಾಂದು ವರದಿ ಮಾಡಿದೆ.

ವಿಶ್ವಕಪ್ ನಲ್ಲಿ ಉಳಿದಿರುವ ಪಂದ್ಯಗಳಿಂದ ಹೊರಗುಳಿಯುವುದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಹಾರ್ದಿಕ್ ಪಾಂಡ್ಯ ಅವರು ಸಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ತಂಡವು ವಿಶ್ವಕಪ್ ಗೆಲ್ಲುವ ನಂಬಿಕೆಯಿದ್ದು, ನಾನು ತಂಡದ ಜತೆಗಿದ್ದು, ಎಲ್ಲಾ ಪಂದ್ಯಗಳನ್ನು ಹುರಿದುಂಬಿಸಲಿದ್ದೇನೆ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಸ್ಥಾನಕ್ಕೆ ಕರ್ನಾಟಕ ಬೌಲರ್ ಪ್ರಸಿದ್ದಿ ಕೃಷ್ಣ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಕಾಲಿಗೆ ಗಾಯವಾಗಿತ್ತು.

More News