BANGALORE BASED NEWZEALAND PLAYER RECORD: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ: ಬೆಂಗಳೂರು ಮೂಲದ ಆಟಗಾರನನ್ನು ಹೊಗಳಿದ ವಿರೇಂದ್ರ ಸೆಹ್ವಾಗ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನ ಬ್ಯಾಟರ್ ರಚಿನ್ ರವೀಂದ್ರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
94 ಎಸೆತದಲ್ಲಿ ನೂರು ರನ್ ಬಾರಿಸಿದ ರಚಿನ್ ರವೀಂದ್ರ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ರಚಿನ್ ರವೀಂದ್ರ ಅವರ ಬ್ಯಾಟಿಂಗ್ ಅನ್ನು ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಹಾಡಿ ಕೊಂಡಾಡಿದ್ದಾರೆ.

https://x.com/virendersehwag/status/1720712095363453390?s=20

27 ವರ್ಷದ ರಚಿನ್ ರವೀಂದ್ರ ಅವರು ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಮೂರು ಶತಕ ಗಳಿಸಿ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್, ಕಳೆದ ಹಲವಾರು ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಸಚಿನ್ ಮತ್ತು ರಾಹುಲ್ ಕಾಟ ಕೊಡುತ್ತಿದ್ದರು. ಈಗಲೂ ಆ ಪ್ರವೃತ್ತಿಯನ್ನು ರಚಿನ್ ಮುಂದುವರೆಸಿದ್ದು, ಅತ್ಯದ್ಭುತ ಆಟ ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ರಚಿನ್ ರವೀಂದ್ರ ಅವರು ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 123 ರನ್ ಗಳಿಸಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ 116 ರನ್ ಗಳಿಸಿದ್ದರು. ಇಂದು ಪಾಕಿಸ್ತಾನ ವಿರುದ್ಧ ಶತಕ ಗಳಿಸಿದ್ದಾರೆ. ರಚಿನ್ ರವೀಂದ್ರ ಅವರು ಮೂಲತಹ ಬೆಂಗಳೂರಿನವರಾಗಿದ್ದು, ಬೆಂಗಳೂರಿನಲ್ಲೇ ಶತಕ ಬಾರಿಸಿ, ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿರುವುದು ಸಂತಸ ತಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.

More News