ACCUSED CLUE FOUND: ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಶಾಸಕರ ಕೈವಾಡದ ಕುರಿತು ತನಿಖೆ ನಂತರ ಬಹಿರಂಗ: ಗೃಹಸಚಿವ

ಬೆಂಗಳೂರು : ಗಣಿ ವಿಜ್ಞಾನಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕರ ಕೈವಾಡ ಇದೆಯೋ ಇಲ್ವೋ ಗೊತ್ತಿಲ್ಲ, ತನಿಖೆ ಮುಗಿದ ಮೇಲೆ ಎಲ್ಲ ಗೊತ್ತಾಗುತ್ತೆ ಎಂದು ವಿವರಿಸಿದರು.
ಯಾವ ಉದ್ದೇಶಕ್ಕಾಗಿ ಕೊಲೆ ಮಾಡಲಾಗಿದೆ, ಯಾರು ಮಾಡಿದ್ದಾರೆ ಅಂತ ತನಿಖೆ ಶುರು ಮಾಡಿದ್ದಾರೆ, ಸುಳಿವು ಸಿಕ್ಕಿದೆ ಅಂತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ, ಶೀಘ್ರದಲ್ಲೇ ಬಂಧಿಸುವ ಕೆಲಸ ನಡೆಯಲಿದೆ ಎಂದು ವಿವರಿಸಿದರು.
ಶಿವಮೊಗ್ಗದಲ್ಲಿ ನಿಗೂಢ ಬಾಕ್ಸ್‌ ಪತ್ತೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಬಾಕ್ಸ್‌ಗಳನ್ನ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ, ತನಿಖೆ ಮುಗಿಯುವವರೆಗೆ ಏನು ಹೇಳಲಾಗಲ್ಲ, ಹೇಳುವುದು ಸಮಂಜಸವೂ ಅಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಗೃಹ ಸಚಿವರು ಇದ್ದಾರ ಇಲ್ವಾ, ಎಂಬ ಬಿಜೆಪಿ ಪ್ರಶ್ನೆಗೆ ಉತ್ತರಿಸಿದ ಅವರು, ಇದ್ದಾರೆ, ಇಲ್ವಾ ಅವರಿಗೆ ಸದ್ಯದಲ್ಲಿಯೇ ಗೊತ್ತಾಗುತ್ತೆ ಬಿಡಿ ಎಂದು ಬಿಜೆಪಿ ಟ್ವೀಟ್‌ಗೆ ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು.

More News

You cannot copy content of this page