ಯೋಧರೊಂದಿಗೆ ದೀಪಾವಳಿ ಆಚರಣೆ : ಪ್ರಧಾನಿಯಾಗಿ ಅಲ್ಲ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ ಪಿಎಂ

ಶ್ರೀನಗರ : ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿ ಯೋಧರೊಂದಿಗೆ ಬೆಳಕಿನ ಹಬ್ಬ ದೀಪಾವಳಿವನ್ನು ಆಚರಿಸಿಕೊಂಡರು. ಪ್ರಧಾನಿಯಾದಗಿನಿಂದಲೂ ಅವರು ಗಡಿಯಲ್ಲಿರುವ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುವ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದ್ದರು.
ಈಬಾರಿ ಗಡಿ ಜಿಲ್ಲೆಯಾದ ರಜೌರಿಯ ನೌಶೇರಾದಲ್ಲಿ ದೀಪಾವಳಿಯನ್ನು ಆಚರಿಸಿಕೊಂಡರು, ಈ ಜಿಲ್ಲೆಯಲ್ಲಿ ಅವರು ಎರಡನೇ ಬಾರಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡರು. ಸೇನಾ ಮುಖ್ಯಸ್ಥ ಎಂ ಎಂ ನರವಣಿ ಅವರು ಮೋದಿಯವರೊಂದಿಗೆ ವೈಮಾನಿಕ ವೀಕ್ಷಣೆಗೆ ನಡೆಸಿದರು.


ಈ ಸಂದರ್ಭದಲ್ಲಿ ಅವರು 2016ರ ಸೆಪ್ಟಂಬರ್ 29 ರಂದು ನಡೆದ ದಾಳಿಯನ್ನು ನೆನಪಿಸಿಕೊಂಡರು. ಅಲ್ಲದೆ, ಸೇನೆಯ ಕೊನೆಯ ಯೋಧ ಸುರಕ್ಷಿತವಾಗಿ ಹಿಂದಿರುಗುವವರೆಗೆ ನಿರ್ದಿಷ್ಟ ದಾಳಿಯ ಉಸ್ತುವಾರಿಯನ್ನು ನೋಡಿಕೊಂಡಿದ್ದೆ ಎಂದು ನರೇಂದ್ರ ಮೋದಿ ಅವರು ತಿಳಿಸಿದರು.
ಇದು ಭಾರತೀಯ ಸೇನೆಯ ನಿರ್ದಿಷ್ಟ ದಾಳಿಯು ಭಾರತೀಯ ಸೇನೆಯ ಕೆಚ್ಚು ಮತ್ತು ಸಾಮರ್ಥ್ಯವನ್ನು ತೋರುತ್ತದೆ ಎಂದರು. ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದದಾಳಿಗೆ ಪ್ರತಿಯಾಗಿ ನಿರ್ದಿಷ್ಟ ದಾಳಿಯನ್ನು ನಡೆಸಲಾಗಿತ್ತು.


ಪ್ರಧಾನಿಯಾಗಿ ಅಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಇಲ್ಲಿಗೆ ಬಂದಿದ್ದೇನೆ, ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನಿಮಗೆ ತಿಳಿಸಲು ಬಂದಿದ್ದೇನೆ ಎಂದು ಮೋದಿಯವರು ವಿವರಿಸಿದರು.

More News