ಬೆಂಗಳೂರು : ಲೋಕಸಭಾ ಚುನಾವಣೆ ಹೊತ್ತಿಗೆ ಶಾಸಕ ಮುನಿರತ್ನ ಹೊರಗೆ ಇರಬಾರದು, ತಿಹಾರ್ ಜೈಲಿಗೆ ಕಳಿಸಬೇಕು ಅಂತ ಅವರ ಆಲೋಚನೆ. ಅದು ಸಾಧ್ಯವಾಗ್ತಿಲ್ಲ ಎಂದು ರಾಜರಾಜೇಶ್ವರಿ ನಗರದ ಬಿಜೆಪಿ ಎಂಎಲ್ಎ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿ ಕೊಲೆಯ ಹಿಂದೆ ಶಾಸಕರೊಬ್ಬರ ಹೆಸರು ಕೇಳಿ ಬರುತ್ತಿರುವ ಸಂಬಂಧ ಮುನಿರತ್ನ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಸದ್ಯ ಮುನಿರತ್ನ ಮನೆ ಮುಂದೆ ಆಕ್ಸಿಡೆಂಟ್ ಆದರೂ ಅದಕ್ಕೆ ಮುನಿರತ್ನ ಕಾರಣ, ತನಿಖೆ ನಡೆಯುತ್ತಿದೆ. ತನಿಖೆ ಸಂಪೂರ್ಣ ನಡೆಯುತ್ತಿದೆ. ಅದರ ಸಂಪೂರ್ಣ ವರದಿ ಹೊರಗೆ ಬರಲಿ. ಸ್ವಾರ್ಥಕ್ಕೆ, ದುರುದ್ದೇಶ ಪೂರಕವಾಗಿ ಹೇಳಿಕೆ ಕೊಡಬಾರದು ಎಂದು ತಿಳಿಸಿದರು.
ರಾಜರಾಜೇಶ್ವರಿನಗರದ ಸಕ್ರಮ ಶಾಸಕ ನಾನು-ಮುನಿರತ್ನ
ರಾಜರಾಜೇಶ್ವರಿ ಕ್ಷೇತ್ರದ ಶಾಸಕರು ಯಾರು ಅಂತ ಸಂದೇಹ ಉಂಟಾಗಿದೆ ಎಂದು ತಿಳಿಸಿದ ಅವರು, ಜನರು ಆಯ್ಕೆ ಮಾಡಿರೋ ಪ್ರಕಾರ ನಾನು. ಅನೈತಿಕವಾಗಿ ಯಾರಾದ್ರೂ ಇದ್ರೆ ಗೊತ್ತಿಲ್ಲ. ಸಂವಿಧಾನ ಪ್ರಕಾರ ನಾನು ಶಾಸಕ. ಅಕ್ರಮ, ಸಕ್ರಮ ಅಂತ ಇರುತ್ತೆ. ಸಕ್ರಮವಾಗಿ ನಾನು ಶಾಸಕ. ಅಕ್ರಮ ಯಾರಾದ್ರೂ ಇದ್ರೆ ಗೊತ್ತಿಲ್ಲ ಎಂದರು.
ಸರ್ಕಾರದ ದಾಖಲೆಯಲ್ಲಿ ಅನೈತಿಕ ಅಂತ ಇದ್ರೆ ಅದು ಗೊತ್ತಿಲ್ಲ. ಅನೈತಿಕ ಕೂಸು ಯಾರು ನೀವೇ ಹೇಳಿ. ನಾನು ಅಕ್ರಮಾನಾ, ಸಕ್ರಮಾನಾ ನೀವೇ ಹೇಳಿ ಎಂರು ಪ್ರಶ್ನಿಸಿದರು.
ಸಿಎಂ ಹುದ್ದೆ ಸಂಬಂಧ ಅನಾವಶ್ಯಕ ಹೇಳಿಕೆ ನೀಡಿದರೆ ನೊಟೀಸ್ ನೀಡಲಾಗುವುದು ಎಂಬುದಕ್ಕೆ ಕಾಂಗ್ರೆಸ್ ಅನ್ನು ಟೀಕಿಸಿದ ಅವರು, ಈಗಲಾದ್ರೂ ಎಚ್ಚೆತ್ತುಕೊಂಡಿದ್ದಾರೆ. 18 ಜನ ಪರವಾಗಿದ್ರೆ, ಉಳಿದವರು ವಿರುದ್ಧವಾಗಿದ್ದಾರೆ, ಹಾಗಾಗಿ ಹೀಗೆ ಕೇಳ್ತಿದ್ದಾರೆ ಎಂದು ಪರೋಕ್ಷವಾಗಿ ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ನಾನು ಸಿಎಂ ಆಕಾಂಕ್ಷಿ ಅನ್ನೋ ವಿಚಾರ ನ್ಯಾಯಯುತವಾಗಿದೆ. ಅವರ ತಂದ್ರೆ ಹಿಂದೆ 50 ವರ್ಷ ಸರ್ವಿಸ್ ಇದೆ. ಅದನ್ನೂ ಸೇರಿಸಿ ಕೇಳಿದ್ದಾರೆ. ತಂದೆಗೆ ಅನ್ಯಾಯ ಆಗಿದೆ, ಅವರು ಕ್ಲೈಮ್ ಮಾಡುತ್ತಿದ್ದಾರೆ, ಅವರು ಕೇಳಿರೋದ್ರಲ್ಲಿ ತಪ್ಪೇನಿಲ್ಲ ಎಂದರು.
ಬರದಲ್ಲಿರುವವರಿಗೆ ಸಾಂತ್ವಾನ ಹೇಳುತ್ತೇವೆ
ಬರ ಅಧ್ಯಯನ ವಿಚಾರವಾಗಿ ಮಾತನಾಡಿದ ಅವರು, ಬರ ಅಧ್ಯಯನ ಮಾಡುತ್ತೇವೆ, ಬರದಲ್ಲಿ ಸಿಲುಕಿರೋರಿಗೆ ಸಾಂತ್ವಾನ ಹೇಳಬೇಕು. ಪಾಪ ಸಚಿವರು ಏನು ಮಾಡುತ್ತಾರೆ, ಒಂದು ಕಾರು, ಕಾರಿಗೆ ಸೈರನ್. ಅಲ್ಲಿ ಹೋಗಿ ಏನು ಆಶ್ವಾಸನೆ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಉಸ್ತುವಾರಿ ಸಚಿವರಿಗೆ ಏನು ಅಧಿಕಾರ ಇದೆ. ಸ್ಥಳದಲ್ಲೇ ಪರಿಹಾರ ಕೊಡುವ ಅಧಿಕಾರ ಕೊಡಿ ಎಂದು ಹೇಳಿದ ಅವರು, ನಾವು ನಡೆಸುತ್ತಿರುವ ಬರ ಅಧ್ಯಯನ ರೈತರಿಗೆ ಸಾಂತ್ವಾನ ಹೇಳಲಾಗುವುದು ಎಂದರು.




