ಬೆಂಗಳೂರು : ಹಿರಿಯ ಭೂ ವಿಜ್ಞಾನಿ ಕೆ ಎಸ್ ಪ್ರತಿಮಾ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ಮಾಜಿ ಚಾಲಕನಾಗಿ ಕೆಲಸ ಮಾಡಿದ್ದ ಕಿರಣ್ ಎಂದು ಗುರುತಿಸಲಾಗಿದೆ.
ಜಂಬು ಸವಾರಿ ದಿಣ್ಣೆಯ ನಿವಾಸ ಕಿರಣ್, ಗುತ್ತಿಗೆ ಆಧಾರದ ಮೇಲೆ ಪ್ರತಿಮಾ ಅವರ ಬಳಿ ಕೆಲಸಕ್ಕೆ ಇದ್ದ, ಆತನನ್ನು ಕೆಲವು ದಿನಗಳ ಹಿಂದೆಯಷ್ಟೇ ಕೆಲಸದಿಂದ ತೆಗೆದುಹಾಕಲಾಗಿತ್ತು. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಪ್ರತಿಮಾ ಅವರ ಬಳಿ ಸಾಕಷ್ಟು ಬಾರಿ ಕೇಳಿದ್ದ, ಅದಕ್ಕೆ ಅವರು ಒಪ್ಪದೇ ಇದ್ದಾಗ ಕೋಪಗೊಂಡು ಆರೋಪಿ ಕಿರಣ್ ಈ ಕೃತ್ಯವೆಸಗಿದ್ದಾನೆ ಎಂದು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ಪ್ರತಿಮಾ ಅವರನ್ನು ಕೊಲೆ ಮಾಡಿ ಕಿರಣ್ ಮುಡಿ ಕೊಡಲು ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ನೇಹಿತರ ಜತೆ ತೆರಳಿದ್ದ ಅಲ್ಲಿಯೇ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




