TIMEOUT FOR SRILANKAN PLAYER ANGELO MATHEWS: ಕ್ರೀಸ್ ಗೆ ತಡವಾಗಿ ಬಂದಿದ್ದಕ್ಕೆ ಔಟ್ ಕೊಟ್ಟ ಅಂಪೈರ್: ಕ್ರಿಕೆಟ್ ಇತಿಹಾಸದಲ್ಲೇ ಒಂದೇ ಒಂದು ಬಾಲ್ ಎದುರಿಸದೇ ಪೆವಿಲಿಯನ್ ಸೇರಿದ ಆಟಗಾರ

ನವದೆಹಲಿ: ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 38 ನೇ ಪಂದ್ಯ ಸಾಕಷ್ಟು ಅಚ್ಚರಿಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಶ್ರೀಲಂಕಾದ ಆಲ್ ರೌಂಡರ್ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಒಂದೇ ಒಂದು ಬಾಲ್ ಎದುರಿಸದೇ, ಬೌಲ್ಡ್, ಕ್ಯಾಚ್ ಅಥವಾ ರನೌಟ್, ಹಿಟ್ ವಿಕೆಟ್ ಆಗದೇ ಪೆವಿಲಿಯನ್ ಸೇರಿಕೊಂಡರು.

ಸರಿಯಾದ ಸಮಯಕ್ಕೆ ಕ್ರೀಸ್ ಗೆ ಬಾರದೇ ಇದ್ದುದ್ದರಿಂದ ಟೈಮ್ ಔಟ್ ನಿಮಯದ ಪ್ರಕಾರ ಬಾಂಗ್ಲಾದೇಶದ ಮನವಿ ಮೇರೆಗೆ ಏಂಜಲೋ ಮ್ಯಾಥ್ಯೂಸ್ ಡಕ್ ಔಟ್ ಆಗಿ, ಇತಿಹಾಸ ಬರೆದು ಡ್ರೆಸ್ಸಿಂಗ್ ರೂಮ್ ಸೇರಿಕೊಂಡರು. ಇದರಿಂದ ಈ ಪಂದ್ಯದಲ್ಲಿ ಬಾಂಗ್ಲಾದೇಶದ ಶ್ರೀಲಂಕಾ ವಿರುದ್ಧ ಜಯಭೇರಿ ಬಾರಿಸಿತು.
ಕ್ರಿಕೆಟ್ ನಲ್ಲಿ ಟೈಮ್ ಔಟ್ ಎಂಬ ನಿಯಮವೊಂದಿದೆ ಎಂದು ಈ ಪಂದ್ಯದಿಂದ ಎಲ್ಲರಿಗೂ ತಿಳಿಯುವಂತಾಯಿತು. ಸಮಯಕ್ಕೆ ಸರಿಯಾಗಿ ಆಟಗಾರ ಕ್ರೀಸ್ ಗೆ ಬಾರದೇ, ಅನಾವಶ್ಯಕವಾಗಿ ವಿಳಂಬ ಮಾಡಿದರೆ, ಹಾಗೆಯೇ ಪಂದ್ಯದಲ್ಲಿ ಶಿಸ್ತನ್ನು ಕಾಪಾಡುವ ಉದ್ದೇಶದಿಂದ ಈ ನಿಯಮ ಜಾರಿಯಲ್ಲಿದೆ.

ಯಾವುದೇ ಒಬ್ಬ ಬ್ಯಾಟರ್ ಔಟ್ ಆದ ಸಂದರ್ಭದಲ್ಲಿ ಮತ್ತೊಬ್ಬ ಬ್ಯಾಟರ್ ಮೂರು ನಿಮಿಷ(ವಿಶ್ವಕಪ್ ನಲ್ಲಿ ಎರಡು ನಿಮಿಷ)ದಲ್ಲಿ ಮುಂದಿನ ಎಸೆತ ಎದುರಿಸಲು ಸಜ್ಜಾಗಬೇಕು. ಆದರೆ ಶ್ರೀಲಂಕಾ ಬ್ಯಾಟರ್ ಮ್ಯಾಥ್ಯೂಸ್ ಮೈದಾನಕ್ಕೆ ಪ್ರವೇಶಿಸಿದಾಗ ಹೆಲ್ಮೆಟ್ ಸಮಸ್ಯೆಯನ್ನು ಎದುರಿಸಿದ್ದಾರೆ. ಇದನ್ನು ಬದಲಾಯಿಸಲು ಡೆಸ್ಸಿಂಗ್ ರೂಮಿನ ಕಡೆ ತೆರಳಿದ್ದಾರೆ. ಇದರಿಂದ ವಿಳಂಬವಾಗಿದೆ.
ಇದನ್ನು ಬಾಂಗ್ಲಾದೇಶದ ತಂಡದ ನಾಯಕ ಶಕೀಬ್ ಅಲ್ ಹಸ್ ಮೇಲ್ಮನವಿ ಸಲ್ಲಿಸಿದ್ದಾರೆ. ಆಗ ಆಂಪೈರ್ ಗಳು ನಿಮಯಗಳ ಬಗ್ಗೆ ಚರ್ಚಿಸಿ ಔಟ್ ಎಂದು ಘೋಸಿಸಿದರು. ಕೆಲ ಸಮಯ ಆಂಪೈರ್ ಮತ್ತು ಬಾಂಗ್ಲಾ ನಾಯಕರೊಂದಿಗೆ ಚರ್ಚೆಗೆ ಮ್ಯಾಥ್ಯೂಸ್ ಮುಂದಾದರೂ ಆದರೂ ಇದಾವುದು ಫಲ ನೀಡದೇ ಇದ್ದುದ್ದರಿಂದ ಅವರು ಪೆವಿಲಿಯನ್ ಕಡೆ ಮುಖ ಮಾಡಬೇಕಾಯಿತು.

More News