ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಸ್ಥಾನದಲ್ಲಿ ಸಪ್ತಪದಿ ಹೆಸರಿನಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹದ ಹೆಸರನ್ನು “ಮಾಂಗಲ್ಯ ಭಾಗ್ಯ” ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.ಈ ಯೋಜನೆ ನವೆಂಬರ್ ನಿಂದ ಜನವರಿಯವರೆಗೆ ರಾಜ್ಯದ ಮುಜರಾಯಿ ಇಲಾಖೆಯಡಿಯಲ್ಲಿ ಬರುವು ದೇಗುಲದಲ್ಲಿ ನಿಗದಿತ ದಿನದಂದು ಸಾಮೂಹಿಕ ಸರಳ ವಿವಾಹ ನಡೆಯಲಿದೆ. ಆಯಾಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಜರಾಯಿ ಇಲಾಖೆಯ ಎ ಮತ್ತು ಬಿ ದರ್ಜೆಯ ದೇಗುಲದಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮ ಜರುಗಲಿದೆ.

ದೇಗುಲದಲ್ಲಿ ವೆಚ್ಚ ಭರಿಸಲು ದುಡ್ಡು ಇಲ್ಲದ ಸಂದರ್ಭದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯಿಂದ 60 ಸಾವಿರ ರೂಪಾಯಿ ಬಳಕೆಗೆ ಅನುಮತಿ ನೀಡಲಾಗಿದೆ. ಇದನ್ನು ವಧುವರರಿಗೆ ಸಹಾಯಧನವಾಗಿ ನೀಡುವ ಹಣವಾಗಿರುತ್ತದೆ. ನವೆಂಬರ್-16, 19, 29 ಡಿಸೆಂಬರ್ 7, 10 ಮತ್ತು ಜನವರಿಯಲ್ಲಿ 28, 31 ರಂದು ಮಾಂಗಲ್ಯ ಭಾಗ್ಯ ಯೋಜನೆ ನಾನಾ ದೇಗುಲಗಳಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಮಾಂಗಲ್ಯ ಭಾಗ್ಯ ಕಾರ್ಯಕ್ರಮವು ದೇಗುಲಗಳಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹವಾಗಿದ್ದು, ಹೆಸರು ನೋಮದಾಯಿಸಲು ಸೂಚಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.




