IND vs NED: 50ನೇ ಶತಕದ ನಿರೀಕ್ಷೆ: ವಿಶ್ವದಾಖಲೆ ಬರೆಯುವ ತವಕದಲ್ಲಿ ಕಿಂಗ್‌ ಕೊಹ್ಲಿ

ಬೆಂಗಳೂರು: ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ಬರೆಯುವ ತವಕದಲ್ಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ “ಚೇಸ್‌ ಮಾಸ್ಟರ್‌” ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ದಾಖಲಿಸಿ ಸಚಿನ್‌ ತೆಂಡುಲ್ಕರ್‌ ಅವರ ದಾಖಲೆ ಸರಿಗಟ್ಟಿದ್ದರು. ಇದೀಗ ಇದೇ ಖುಷಿಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಸೆಂಚುರಿ ಬಾರಿಸುವ ತವಕದಲ್ಲಿರುವ ಕಿಂಗ್‌ ಕೊಹ್ಲಿ, ಆ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜಾಗಿದ್ದಾರೆ.

ವಿಶ್ವಕಪ್‌ನ ಕಳೆದ ಪಂದ್ಯದಲ್ಲಿ ಸೌತ್‌ ಆಫ್ರಿಕಾ ವಿರುದ್ಧ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ “ರನ್‌ ಮಷಿನ್‌” ಕೊಹ್ಲಿ, ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನ ಪೂರೈಸಿರುವ ವಿರಾಟ್‌, 50ನೇ ಶತಕದ ಹೊಸ್ತಿಲಲ್ಲಿದ್ದಾರೆ.

ಹೀಗಾಗಿ ಬೆಂಗಳೂರಿನಲ್ಲಿ ನಡೆಯುವ ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಈ ಐತಿಹಾಸಿಕ ಮೈಲಿಗಲ್ಲು ತಲುಪುವ ಅವಕಾಶ ಕೊಹ್ಲಿಗೆ ಲಭಿಸಿದೆ. ಒಂದೊಮ್ಮೆ ನೆದರ್ಲೆಂಡ್ಸ್‌ ವಿರುದ್ಧ ಈ ಸಾಧನೆ ಮಾಡಲು ಸಾಧ್ಯವಾಗದಿದ್ದಲ್ಲಿ, ಸೆಮಿಫೈನಲ್‌ನಲ್ಲಿ ಮತ್ತೊಂದು ಅವಕಾಶ ದೊರೆಯಲಿದೆ.

ಆದರೆ ಬೆಂಗಳೂರು ವಿರಾಟ್‌ ಕೊಹ್ಲಿ ಅವರ ನೆಚ್ಚಿನ ತಾಣ ಹಾಗೂ 2ನೇ ತವರು ಎಂದೇ ಗುರುತಿಸಲಾಗಿದೆ. ಹೀಗಾಗಿ ತಮ್ಮ ನೆಚ್ಚಿನ ಬೆಂಗಳೂರು ಪ್ರೇಕ್ಷಕರ ಎದುರೇ ಈ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ನೆದರ್ಲೆಂಡ್ಸ್‌ ವಿರುದ್ಧ ಶತಕ ಬಾರಿಸುವ ಆತ್ಮವಿಶ್ವಾಸದೊಂದಿಗೆ ಕೊಹ್ಲಿ ನಾಳಿನ(ನ.12) ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

More News