PSI RE-EXAM: PSI 545 ಮತ್ತು 400 ಹುದ್ದೆ ಪರೀಕ್ಷೆ ಹೇಗಿರಲಿದೆ..? ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದೇನು..?

ಬೆಂಗಳೂರು: 545ರ ಜೊತೆಗೆ ಇನ್ನೂ ೪೦೦ ಪೋಸ್ಟ್ ಖಾಲಿ ಇದ್ದು, ಒಟ್ಟಿಗೆ ಪರೀಕ್ಷೆ ಮಾಡಬೇಕಾ..? ಅಥವಾ ಪ್ರತ್ಯೇಕವಾಗಿ ಮಾಡಬೇಕಾ ಎಂಬ ಚರ್ಚೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

ಪಿಎಸ್ಐ ಮರುಪರೀಕ್ಷೆಗೆ ಕೋರ್ಟ್ ತೀರ್ಪು ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಂಪೂರ್ಣ ಆದೇಶವನ್ನು ನಾನು ನೋಡಿಲ್ಲ. ನಮ್ಮ ಎಜಿ ಜೊತೆ ಮಾತನಾಡಿದ್ದೇನೆ. ಬೇಗ ಪರೀಕ್ಷೆ ಮಾಡುವಂತೆ ಸೂಚಿಸಿದೆ.‌ ಸ್ವತಂತ್ರ ಸಂಸ್ಥೆಯಿಂದ ಮಾಡಿಸುವಂತೆ ಹೇಳಿದೆ. ಆದೇಶ ಕೈ ಸೇರಿದ ಮೇಲೆ ಕ್ರಮ ತೆಗೆದುಕೊಳ್ತೇವೆ.‌
ನಮಗೆ ಓದಲು ಸಮಯ ಕೊಡಿ ಎಂದು
ಅಭ್ಯರ್ಥಿಗಳು ಸಮಯ ಕೇಳ್ತಿದ್ದಾರೆ. ಅದನ್ನು ಪರಿಗಣಿಸುತ್ತೇವೆ. ಯಾವ ರೀತಿ ಮಾಡಬೇಕೆಂದು ಗೊತ್ತಿಲ್ಲ
ಚರ್ಚೆ ಹಂತದಲ್ಲಿದ್ದೇವೆ ಎಂದರು.

ಪಿಎಸ್ ಐ ನೇಮಕಾತಿ ಬಳಿಕ ಅವರಿಗೆ ತರಬೇತಿ ನೀಡಬೇಕು. ತರಬೇತಿ‌ ನೀಡಲು ಒಂದು ವರ್ಷ ಆಗಲಿದೆ.
ಹಾಗಾಗಿ ನಾವು ರೂಲ್ ೩೨ ನಲ್ಲಿ ಪ್ರಮೋಟ್ ಮಾಡಿದ್ದೇವೆ. ೫೦೦,೬೦೦ ಎಎಸ್ ಐ ಗಳನ್ನ ಪ್ರಮೋಟ್ ಮಾಡಿದ್ದೇವೆ. ೫೪೫ರ ಜೊತೆಗೆ ಇನ್ನೂ ೪೦೦ ಪೋಸ್ಟ್ ಖಾಲಿಯಿದೆ. ಹಾಗಾಗಿ ಒಟ್ಟಿಗೆ ಮಾಡಬೇಕಾ..?
ಪ್ರತ್ಯೇಕವಾಗಿ ಮಾಡಬೇಕಾ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು‌

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ವಿಚಾರದ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ವಿಜಯೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಪಕ್ಷವಾಗಿ ನಮಗೆ ಸಲಹೆ ಸೂಚನೆ ಕೊಡಲಿ. ನಾವು ತಪ್ಪು ಮಾಡಿದ್ರೆ ಎತ್ತಿ ಹಿಡಿಯಲಿ.‌ಕ್ಷುಲ್ಲಕ ವಿಚಾರದ ಬಗ್ಗೆ ಮಾತನಾಡಿದ್ರೆ ಒಪ್ಪಲ್ಲ. ಒಳ್ಳೆಯ ರಾಜಕಾರಣದ ವ್ಯವಸ್ಥೆ ಮಾಡಿಕೊಳ್ಳಬೇಕು. ಆಗ ರಾಜ್ಯದಲ್ಲಿ ಅವರಿಗೆ ಒಳ್ಳೆಯದಾಗುತ್ತದೆ. ನಾನು ಅದನ್ನು ನಿರೀಕ್ಷೆ ಮಾಡುತ್ತೇನೆ.
ಮುಂದೆ ನೋಡೋಣ ಹೇಗೆ ಆಗುತ್ತೆಂದು ಎಂದರು.

ಲಿಂಗಾಯತರು ವಿಜಯೇಂದ್ರ ಬೆನ್ನಿಗೆ ನಿಲ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಪಕ್ಷದಲ್ಲಿ ಲೆಕ್ಕಾಚಾರದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆ ಮಾಡಿದ್ದಾರೆ.‌
ಬೆಳವಣಿಗೆ ಯಾವ ರೀತಿ ಆಗುತ್ತೆ ಎಂದು ನೋಡಬೇಕು.‌
ಅದಕ್ಕೆ ಪ್ರತಿಯಾಗಿ ನಾವು ಮಾಡಬೇಕಲ್ವಾ? ಕಾದು ನೋಡುತ್ತೇವೆ. ಸೂಕ್ಷ್ಮವಾಗಿ ಗಮಿಸುತ್ತೇವೆ. ಆ ನಂತರ ನಮ್ಮ ರಣನೀತಿ ನಾವು ರೂಪಿಸುತ್ತೇವೆ ಎಂದು ತಿಳಿಸಿದರು.

More News