New Crocodile Found: “ಬಬಿಯಾ” ಇಹಲೋಕ ತ್ಯಜಿಸಿದ ಒಂದು ವರ್ಷದ ಬೆನ್ನಲ್ಲೇ ಹೊಸ ಮೊಸಳೆ ಪತ್ತೆ: ಸಂತಸ ಹಂಚಿಕೊಂಡ ಸಿಟಿ ರವಿ

ಬೆಂಗಳೂರು: ಕರ್ನಾಟಕ ಗಡಿ‌ಭಾಗ ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದ ದೇವರ ಮೊಸಳೆ ಎಂದೇ ಖ್ಯಾತವಾಗಿದ್ದ ‘ಬಬಿಯಾ’ ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದ ಒಂದು ವರ್ಷದ ಬೆನ್ನಲ್ಲೇ ಹೊಸ ಮೊಸಳೆ ಪತ್ತೆಯಾಗಿದೆ.

ಮಂಗಳೂರು ಗಡಿಭಾಗದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಸ್ಥಾನ ದಲ್ಲಿ ಸಸ್ಯಹಾರಿ ಮೊಸಳೆ ಎಂದೇ ಪ್ರಖ್ಯಾತಿ ಪಡೆದಿದ್ದ ಬಬಿಯಾ ಎಂಬ ಹೆಸರಿನ ಮೊಸಳೆ ಕಳೆದ 70 ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿದೆ ಎಂಬ ನಂಬಿಕೆಯಿತ್ತು. ತಿರುವನಂತಪುರಂ ನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದ ಕಲ್ಯಾಣಿಯಲ್ಲಿ ಬಬಿಯಾ ಕಳೆದ ಒಂದು ವರ್ಷದ ಹಿಂದೆ ಇಹಲೋಕ ತ್ಯಜಿಸಿತ್ತು.

ಇದೀಗ ಅದೇ ಸರೋವರ ಕ್ಷೇತ್ರ ಕುಂಬಳೆ ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಮತ್ತೆ ಹೊಸ ಮೊಸಳೆ ಪ್ರತ್ಯಕ್ಷ ವಾದ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಪದ್ಮನಾಭ ಕ್ಷೇತ್ರದ ಕೊಳದಲ್ಲಿ ವಾಸವಾಗಿದ್ದ ದೈವಸ್ವರೂಪಿ ಮೊಸಳೆ ಬಬಿಯಾ ಹರಿಯ ಪಾದ ಸೇರಿದ ಬಳಿಕ ಸುಮಾರು ಒಂದು ವರ್ಷದ ನಂತರ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

More News