Chaitra Attacked by African Prisoners: ಪರಪ್ಪನ ಅಗ್ರಹಾರದಲ್ಲಿ ವಂಚಕಿ ಚೈತ್ರಾ ಮೇಲೆ ಹಲ್ಲೆ..!

ಬೆಂಗಳೂರು: ಆಫ್ರಿಕನ್ ಮಹಿಳಾ ಖೈದಿಗಳಿಂದ ವಂಚಕಿ ಚೈತ್ರಾ ಕುಂದಾಪುರ ಮೇಲೆ ಹಲ್ಲೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಎಂಬುವವರಿಂದ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದ ಎ1 ಆರೋಪಿಯಾಗಿ ಚೈತ್ರಾ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಚೈತ್ರ ಕುಂದಾಪುರ ಜೊತೆಗೆ ಇನ್ನುಳಿದ ಆರೋಪಿಗಳಾದ ಮೋಹನ್, ರಮೇಶ್, ಚೆನ್ನಾನಾಯ್ಕ್, ಧನರಾಜ್ ಎಂಬುವವರು ಸಹ ಇದೇ ಜೈಲಿನಲ್ಲಿದ್ದಾರೆ.

ನಿನ್ನೆ ಮಧ್ಯಾಹ್ನ ಜೈಲಿನಲ್ಲಿ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಖೈದಿಗಳ ಜೊತೆಗೆ ಚೈತ್ರಾಗೆ ವಿವಾದ ಶುರುವಾಗಿದ್ಯಂತೆ.. ಡ್ರಗ್ಸ್ ಸಾಗಾಟ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಫ್ರಿಕನ್ ಮಹಿಳಾ ಖೈದಿಗಳು ಏಕಾಏಕಿ ಮಹಿಳಾ‌‌ ವಿಚಾರಣಾಧೀನ ಖೈದಿಗಳ ಬ್ಯಾರಕ್ ಗೆ ನುಗ್ಗಿ ಚೈತ್ರಾ ಹಾಗೂ ಮೂವರು ಸ್ಥಳೀಯ ಖೈದಿಗಳಿಗೆ ಹಲ್ಲೆ ಮಾಡಿರೋ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಟುಂಬಸ್ಥರಿಗೆ, ಸ್ನೇಹಿತರಿಗೆ ಕರೆ ಮಾಡಿ ನೋವು ತೋಡಿಕೊಂಡ ಚೈತ್ರಾ

ಖೈದಿಗಳಿಗೆ ವಾರಕ್ಕೊಮ್ಮೆ ಲ್ಯಾಂಡ್ ಲೈನ್ ನಿಂದ ಕುಟುಂಬಸ್ಥರ ಜೊತೆ ಮಾತನಾಡೋಕೆ ಅವಕಾಶ ಇರುತ್ತೆ..
ನಿನ್ನೆ ಲ್ಯಾಂಡ್ ಲೈನ್ ಮೂಲಕ ಜೈಲಿನಲ್ಲಿ ಕುಟುಂಬಸ್ಥರು, ಸ್ನೇಹಿತರಿಗೆ ಚೈತ್ರಾ ಕರೆ ಮಾಡಿ ಅಳಲು ಪ್ರಾರಂಭಿಸಿದರಂತೆ.. ರಾಷ್ಟ್ರಗೀತೆ ವಿಚಾರಕ್ಕೆ ಜಗಳ ಶುರುವಾಯ್ತು.. ಈ ವೇಳೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಜೈಲಿನಲ್ಲಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ನಿಜವಾಗಿಯೂ ರಾಷ್ಟ್ರ ಗೀತೆ ವಿಚಾರಕ್ಕೇ ಜೈಲಿನಲ್ಲಿ ಗಲಾಟೆ ಆಯ್ತಾ..? ಗಲಾಟೆ ಆಗಲಿಕ್ಕೆ ಅಸಲಿಗೆ ಕಾರಣ ಏನು ಎಂಬ ಬಗ್ಗೆ ಸಧ್ಯದ ವರೆಗೂ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಪರಪ್ಪನ ಅಗ್ರಹಾರ ಪೊಲೀಸರಿಗೆ ಘಟನೆ ಬಗ್ಗೆ ಚೈತ್ರ ಮಾಹಿತಿ ನೀಡಿದ್ದು, ದೂರಿನ ಅನ್ವಯ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.

More News