ಪ್ರಧಾನಿ ನರೇಂದ್ರ ಮೋದಿಯವರಿಂದ ಕೇದಾರನಾಥದಲ್ಲಿ ಶಂಕರಾಚಾರ್ಯ ಪ್ರತಿಮೆ ಅನಾವರಣ

ಉತ್ತರಾಖಂಡ್ : ಆದಿ ಗುರು ಶ್ರೀ ಶಂಕರಾಚಾರ್ಯ ಅವರ ಪ್ರತಿಮೆಯನ್ನು ಕೇದಾರನಾಥದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಅನಾವರಣಗೊಳಿಸಿದರು. ಸುಮಾರು 12 ಅಡಿ ಎತ್ತರದ 28 ಟನ್ ತೂಕದ ಏಕಶಿಲಾ ಪ್ರತಿಮೆಯನ್ನು ಉದ್ಘಾಟಿಸಿದರು.
ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯಿಂದ ಮೂಡಿಬಂದಿರುವ ಪ್ರತಿಮೆ ಇದಾಗಿದ್ದು, ಈ ಪ್ರತಿಮೆಯ ಮುಂದೆ ನರೇಂದ್ರ ಮೋದಿ ಅವರು ಕೂತು ಧ್ಯಾನ ಮಾಡಿ, ಪ್ರತಿಮೆಗೆ ನಮಸ್ಕರಿಸಿದರು. ಕಳೆದ ಸೆಪ್ಟಂಬರ್ ನಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಕಾರ್ಯವನ್ನು ಆರಂಭ ಮಾಡಿದ್ದರು.


ಮೈಸೂರಿನಿಂದ ರಸ್ತೆ ಮೂಲಕ ಪ್ರತಿಮೆ ಸಾಗಿಸಿ, ಚಿನೋಕ್ ನಿಂದ ಹೆಲಿಕಾಪ್ಟರ್ ಮೂಲಕ ಪ್ರತಿಮೆಯನ್ನು ಕೇದಾರನಾಥ್ ಕ್ಕೆ ಸಾಗಿಸಲಾಗಿತ್ತು. ಇದನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು.

ಇದಕ್ಕೂ ಮುನ್ನಾ ಮೋದಿಯವರು ಕೇದಾರನಾಥ ದೇವಾಲಯಕ್ಕೆ ತೆರಳಿಸಿ ಅಲ್ಲಿ ಕೇದಾರನಾಥ ಮತ್ತು ಶಿವಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ರುದ್ರಾಭಿಷೇಕವನ್ನೂ ನೆರವೇರಿಸಿದರು. ಕೇದಾರನಾಥದಲ್ಲಿರುವ ಬಹುತೇಕ ಎಲ್ಲ ಗುಡಿಗಳಿಗೂ ಪ್ರಧಾನಿ ತೆರಳಿ ನಮಸ್ಕರಿಸಿದರು.

ಹಾಗೆಯೇ ಹಿಮಾಲಯದ ದೇವಾಲಯಗಳ ಮರು ನಿರ್ಮಾಣಕ್ಕಾಗಿ 300 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿದರು.

2013ರಲ್ಲಿ ಉಂಟಾದ ಪ್ರವಾಹದಲ್ಲಿ ಶಂಕರಾಚಾರ್ಯರ ಪ್ರತಿಮೆಗೆ ಹಾನಿಯಾಗಿತ್ತು. ಇದಾದ ಬಳಿಕ ಮೋದಿ ಅಲ್ಲಿಯೇ ಆದಿ ಗುರುಗಳ ಪ್ರತಿಮೆ ಮತ್ತು ವಸ್ತುಸಂಗ್ರಹಾಲಯ ನಿರ್ಮಿಸುವುದಾಗಿ ಘೋಷಿಸಿದ್ದರು.

More News