ಬೆಂಗಳೂರು : ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣ ನಡೆದ ಎರಡು ದಿನಗಳಲ್ಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಇದೊಂದು ಯಶಸ್ವಿ ಕಾರ್ಯಾಚರಣೆಯಾಗಿದೆ. ಸರ್ಕಾರದ ಪರವಾಗಿ ಪೊಲೀಸ್ ಇಲಾಖೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಆರೋಪಿಗಳ ಶೀಘ್ರ ಬಂಧನಕ್ಕೆ ಸೂಚಿಸಿದ್ವಿ ಸಿಎಂ ಮತ್ತು ನಾನು ಪೊಲೀಸರಿಗೆ ಸೂಚನೆ ನೀಡಿದ್ವಿ, ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸ ಇತ್ತು ಎಂದು ಅವರು ತಿಳಿಸಿದ್ದಾರೆ.
ಇಂಥ ವಿಕೃತ ಮನಸಿನ ವ್ಯಕ್ತಿಗಳಿಗೆ ಪೊಲೀಸ್ ಇಲಾಖೆ ಒಳ್ಳೆಯ ಮೆಸೇಜ್ ಪಾಸ್ ಮಾಡಿದೆ ಎಂದು ತಿಳಿಸಿದ ಗೃಸಚಿವರು ಘಟನೆ ನಡೆದಾಗ ಆತಂಕ ಮನೆ ಮಾಡಿತ್ತು, ಪೊಲೀಸರಿಗೆ ಸವಾಲಿತ್ತು, ಸಂತ್ರಸ್ತೆ ಹೇಳಿಕೆ ಕೊಡುವ ಪರಿಸ್ಥಿತಿಯಲ್ಲಿಲ್ಲ, ವೈಜ್ಞಾನಿಕ ವಾಗಿ, ತಾಂತ್ರಿಕವಾಗಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ತಂಡಗಳಿಗೆ ಐದು ಲಕ್ಷ ಬಹುಮಾನ ನೀಡಲಾಗುವುದು, ಆರೋಪಿಗಳು ಪ್ರತಿ ದಿನ ತಮಿಳುನಾಡಿನಿಂದ ಮೈಸೂರಿಗೆ ಬಂದು ಹೋಗುತ್ತಿದ್ದರು. ಸಂತ್ರಸ್ತೆಯ ಹೇಳಿಕೆಗಾಗಿ ಆಕೆಯ ಕುಟುಂಬದ ಸದಸ್ಯರಿಗೆ ಮನವೊಲಿಕೆ ಮಾಡಲಾಗುತ್ತಿದೆ ಎಂದರು.
ಇತಹ ಪ್ರಕರಣಗಳು ಮರುಕಳಿಸದಂತೆ ಚಾಮುಂಡಿ ಬೆಟ್ಟದ ಸುತ್ತಮುತ್ತ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಐವರು ಆರೋಪಿಗಳಲ್ಲಿ ಓರ್ವ ಬಾಲಾಪರಾಧಿ: ಪ್ರವೀಣ್ ಸೂದ್
ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಹೇಳಿಕೆ ನೀಡಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ ಆರೋಪಿ ಸೇರಿ ಐದು ಮಂದಿಯನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರಿನ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಿಗಳ ಪತ್ತೆಗೆ ಒಟ್ಟು ಏಳು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಇವರು 5 ಮಂದಿ ಬಂಧಿಸಿದ್ದಾರೆ. ಐವರಲ್ಲಿ ಆರೋಪಿಗಳ ಪೈಕಿ ಒಬ್ಬ ಬಾಲಾರೋಪಿ ಎಂದು ತಿಳಿಸಿದರು.

ಆ.24 ರಂದು 7-8ಗಂಟೆ ನಡುವೆ ಈ ಘಟನೆ ನಡೆದಿದೆ. ಬಂಧಿತ ಐವರೂ ಕೂಡಾ ತಮಿಳುನಾಡಿನ ತಿರುಪುರದವರು. ಪ್ರಕರಣದಲ್ಲಿ 6 ಮಂದಿ ಆರೋಪಿಗಳಿದ್ದಾರೆ. ಇವರಲ್ಲಿ ಓರ್ವ ತಲೆಮರಿಸಿಕೊಂಡಿದ್ದಾನೆ ಎಂದು ತಿಳಿಸಿದರು.
ಆರೋಪಿಗಳು ಆಗಾಗ್ಗೆ ಮೈಸೂರಿಗೆ ಬರ್ತಾ ಇದ್ದರು. ಇವರೆಲ್ಲಾ ಲೇಬರ್ ಕ್ಲಾಸ್ ನವರು, ಚಾಲಕರು, ಕೂಲಿ ಕೆಲಸದವರು. ಪ್ರಾಥಮಿಕ ಮಾಹಿತಿ ಪ್ರಕಾರ ಓರ್ವ ಅಪ್ರಾಪ್ತ ಇದ್ದಾನೆ. ಎಲ್ಲಾ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿರುವುದರ ಬಗ್ಗೆ ಮಾಹಿತಿ ಇದೆ ಎಂದು ಎಂದು ಪ್ರವೀಣ್ ಸೂದ್ ಪ್ರಕರಣ ಸಂಬಂಧ ಮಾಹಿತಿ ನೀಡಿದರು.