Bigg Boss: ಜೈಲು ಸೇರ್ತಾರಾ ತನಿಷಾ ಕುಪ್ಪಂಡ..?

ಬೆಂಗಳೂರು: ಬಿಗ್ ಬಾಸ್ ಅಭ್ಯರ್ಥಿ ತನಿಷಾ ಕುಪ್ಪಂಡ ವಿರುದ್ಧ FIR
ದಾಖಲಾಗಿದೆ. ತನಿಷಾ ಕುಪ್ಪಂಡ ವಿರುದ್ಧ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.

ಇತ್ತೀಚೆಗೆ ಅಷ್ಟೇ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ವಿಚಾರವನ್ನ ಪ್ರಸ್ತಾಪಿಸಿ ಸದ್ದು ಮಾಡಿದ್ದರು. ಸಹಜವಾಗಿ ಮಾತನಾಡಿದ ಮಾತುಗಳೇ ಠಾಣೆ ಮೆಟ್ಟಿಲೇರಿರುವಂತೆ ಮಾಡಿತ್ತು. ಇದೀಗ ತನಿಷಾ ಕುಪ್ಪಂಡ ವಿರುದ್ಧ ಜಾತಿ ನಿಂದನೆ ವಿಚಾರವಾಗಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಷಾ ಖಾಸಗಿ ವಾಹಿನಿಯಾದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆಂದು ದೂರಿ, ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ದೂರು ದಾಖಲಿಸಿದ್ದಾರೆ. ಪದ್ಮಾ ಅವರು ನವೆಂಬರ್ 11ರಂದು ದೂರು ನೀಡಿದ್ದು, ನಟಿ ವಿರುದ್ಧ ನವೆಂಬರ್‌ 12 ರಂದು ದೂರಿನ ಆಧಾರದ ಮೇಲೆ‌ ಎಫ್‌ಐಆರ್ ದಾಖಲಿಸಿದ್ದಾರೆ.

ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ನಲ್ಲಿ ಅಭ್ಯರ್ಥಿ ಡ್ರೋನ್ ಪ್ರತಾಪ್‌ ಮತ್ತು ತನಿಷಾ ನಡುವೆ ಮಾತುಕತೆ ನಡೆಯುತ್ತೆ. ಮಾತನಾಡುವ ಭರದಲ್ಲಿ ಬೋವಿ ಜನಾಂಗಕ್ಕೆ ಅವಮಾನ ಮಾಡುವ ರೀತಿ ಮಾತನಾಡಿದ್ದಾರೆ ಎಂದು ಪದ್ಮಾ ಎಂಬುವವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಆಕೆಯನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

More News