ಬೆಂಗಳೂರು : ಏಕದಿನ ವರ್ಲ್ಡ್ ಕಪ್ ನಲ್ಲಿ ಭಾರತ ತಂಡಕ್ಕೆ ಶುಭ ಹಾರೈಸಲೆಂದು ರಾಜಾಜಿನಗರದ ಒರಿಯನ್ ಮಾಲ್ ನಲ್ಲಿ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಅದ್ವಿತೀಯ ಆಟಗಾರ ವಿರಾಟ್ ಕೊಹ್ಲಿ ಅವರುಗಳ ಚಿತ್ರವನ್ನು ನಮ್ಮ ಪ್ರಾಚೀನ ದೇಶೀ ಕಲೆಯಾದ ರಂಗೋಲಿಯ ಮೂಲಕ ಅರ್ಪಿಸುತ್ತಿದೆ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪಿ ಎಚ್ ಡಿ ವಿದ್ಯಾರ್ಥಿಯಾದ, ಅಂತರರಾಷ್ಟ್ರೀಯ ರಂಗೋಲಿ ಕಲಾವಿದ ಮತ್ತು ‘ದಿ ರಂಗೋಲಿ ಬಾಯ್ ಆಫ್ ಇಂಡಿಯಾ’ ಅಂತಲೇ ಹೆಸರುವಾಸಿಯಾದ ಆಚಾರ್ಯ ಅಕ್ಷಯ್ ಅವರಿಂದ ಈ ಕಲಾತ್ಮಕ 20ಅಡಿ X 20 ಅಡಿ ಆಕೃತಿ 20 ಗಂಟೆಗಳಲ್ಲಿ ಮೂಡಿ ಬಂದಿದೆ.
ಇದರಿಂದ ಇಂದು ನಡೆಯುತ್ತಿ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಶುಭ ಹಾರೈಸಿಲಾಯಿತು. ಈ ಬಾರಿ ವಿಶ್ವಕಪ್ ಗೆಲ್ಲಲಿ ಎಂದು ನೂರಾರು ಅಭಿಮಾನಿಗಳು ಶುಭ ಹಾರೈಸಿದರು.




