SUBRATA ROYPASSES AWAY: ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ನಿಧನ

ಮುಂಬೈ : ಸಹಾರಾ ಗ್ರೂಪ್ ನ ಅಧ್ಯಕ್ಷ ಸುಬ್ರತಾ ರಾಯ್ ಇಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿದ್ದ ಿವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


1948ರಲ್ಲಿ ಬಿಹಾರದಲ್ಲಿ ಜನಿಸಿದ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ. 1978 ರಲ್ಲಿ ಕೇವಲ ಎರಡು ಸಾವಿರ ರೂಪಾಯಿ ಬಂಡವಾಳದೊಂದಿಗೆ ಪ್ರಾರಂಭಿಸಿದ ಸಹಾರಾ ಗ್ರೂಪ್ ಕಂಪನಿಯು ಇದೀಗ ಮಂಚೂಣಿಯಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.
ಹೂಡಿಕೆದಾರರ ಸಾವಿರಾರು ಕೋಟಿ ರೂಪಾಯಿ ಹಿಂದಿರುಗಿಸಲು ಸಾಧ್ಯವಾಗದೇ ಇದ್ದುದ್ದರಿಂದ ಅವರು ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದರು. ರಿಯಲ್ ಎಸ್ಟೇಟ್, ಫೈನಾನ್ಸ್, ಮೀಡಿಯಾ ಮತ್ತು ಹಾಸ್ಪಿಟಾಲಿಟಿ ಸೇರಿದಂತೆ ಹಲವು ರಂಗದಲ್ಲಿ ಅವರು ಉದ್ಯಮಿಯಾಗಿದ್ದರು.
ಸುಬ್ರತಾ ರಾಯ್ ಅವರ ನಿಧನಕ್ಕೆ ಸಮಾಜವಾದಿ ಪಕ್ಷ ಮುಖಂಡ ಅಖಿಲೇಶ್ ಯಾದವ್ ಸಂತಾಪ ಸೂಚಿಸಿದ್ದಾರೆ.

More News