ಬೆಂಗಳೂರು : ವಿದ್ಯುತ್ ಕಳವು ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ದ ಎಫ್ ಐಅರ್ ದಾಖಲಾದ ಬೆನ್ನಲ್ಲೇ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದ ಗೋಡೆಯ ಮೇಲೆ ‘ಕರೆಂಟ್ ಕಳ್ಳ ಹೆಚ್ ಡಿ ಕುಮಾರಸ್ವಾಮಿ’ ಎನ್ನುವ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದಾರೆ.
ತಮ್ಮ ಮನೆಯ ದೀಪಾಂಲಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಕರೆಂಟ್ 200 ಯೂನಿಟ್ ಮಾತ್ರ ಉಚಿತ ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ, ಕರೆಂಟ್ ಕದ್ದರೂ ಎಚ್ ಡಿ ಕೆ ಅವರ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಎಂದು ಪೋಸ್ಚರ್ ನಲ್ಲಿ ಬರೆಯಲಾಗಿದೆ.

ಪೋಸ್ಟರ್ ಸಂಬಂಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೋಸ್ಟರ್ ತೆಗೆಯುವ ಕೆಲಸ ಮಾಡಿದರು. ಇದೀಗ ಈ ಪ್ರಕರಣ ರಾಜಕೀಯ ವಲಯದಲ್ಲಿ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ನಿನ್ನೆಯೇ ಕುಮಾರಸ್ವಾಮಿ ಸಚಿವ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಈ ವಿಚಾರವಾಗಿ ಸ್ಪಷ್ಟನೇ ನೀಡಿರುವ ಕುಮಾರಸ್ವಾಮಿ, ತಮ್ಮ ಅರಿವಿಗೆ ಬಾರದೇ ಈ ಪ್ರಮಾದವಾಗಿದೆ, ಬೆಸ್ಕಾಂ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ, ಹಾಗೂ ಇದಕ್ಕೆ ತಗಲುವ ದಂಡ ಪಾವತಿಸುವೇ ಎಂದು ಹೇಳಿದ್ದಾರೆ.
ಇದರೊಂದಿಗೆ ತಮ್ಮವರು ಮಾಡಿರುವುದು ತಪ್ಪು ಎಂದು ತಿಳಿದರೂ ಕೂಡ ಡಿ ಕೆ ಶಿವಕುಮಾರ್ ವಿರುದ್ಧ ನಾನಾ ರೀತಿಯಲ್ಲಿ ಆರೋಪ ಮಾಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.