Kohli Broke Sachin’s Record:: ಸಚಿನ್ ದಾಖಲೆ ಮುರಿದ ಕಿಂಗ್‌ ಕೊಹ್ಲಿ: ವಿರಾಟ್ ಬಗ್ಗೆ ಏನಂದ್ರು ಗೊತ್ತಾ ತೆಂಡೂಲ್ಕರ್..?

ಬೆಂಗಳೂರು: ನ್ಯೂಜಿ಼ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ವಿರಾಟ್‌ ಕೊಹ್ಲಿ(117) ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಇನ್ನಿಂಗ್ಸ್‌ ಆರಂಭದಿಂದಲೇ ಜವಾಬ್ದಾರಿಯ ಆಟವಾಡಿದ ಕಿಂಗ್‌ ಕೊಹ್ಲಿ,(117 ರನ್‌, 113 ಬಾಲ್‌, 9 ಬೌಂಡರಿ, 2 ಸಿಕ್ಸ್‌) ಕಿವೀಸ್‌ ಬೌಲಿಂಗ್‌ ದಾಳಿಯನ್ನ ಧೂಳಿಪಟ ಮಾಡಿದರು. ಅಲ್ಲದೇ ಈ ಶತಕದ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 50ನೇ ಶತಕ ಸಿಡಿಸಿದ ಚೇಸ್‌ ಮಾಸ್ಟರ್‌, ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌(49 ಶತಕಗಳು) ಅವರ ಹೆಸರಿನಲ್ಲಿದ್ದ ದಾಖಲೆಯನ್ನ ಬ್ರೇಕ್‌ ಮಾಡುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದರು.

ಈ ಹಿಂದೆ ಸಚಿನ್ ತೆಂಡೂಲ್ಕರ್ 2003 ರಲ್ಲಿ ಟೂರ್ನಿಯೊಂದರಲ್ಲಿ ಗರಿಷ್ಠ ಅರ್ಧ ಶತಕ ದಾಖಲಿಸಿದ್ದ ದಾಖಲೆಯನ್ನು ಕೊಹ್ಲಿ ಮುರಿದಿದ್ದರು. ಇದೀಗ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳನ್ನು ಗಳಿಸಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ.

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ತನ್ನ ದಾಖಲೆ ಮುರಿದ ವಿರಾಟ್‌ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್‌ ತೆಂಡೂಲ್ಕರ್‌, “ನಾನು ಮೊದಲ ಬಾರಿ ನಿನ್ನನ್ನು ಕಂಡದ್ದು ಡ್ರೆಸ್ಸಿಂಗ್ ರೂಮ್‌ನಲ್ಲಿ . ನೀವು ನನ್ನ ಪಾದ ಮುಟ್ಟಿದ್ದಕ್ಕೆ ಸಹ ಆಟಗಾರರು ತಮಾಷೆ ಮಾಡಿದ್ದರು. ಅಂದು ನನಗೂ ನಗು ತಡೆಯಲಾಗಲಿಲ್ಲ. ಆದ್ರೆ ಶೀಘ್ರವಾಗಿ ನೀವು ನನ್ನ ಹೃದಯ ಮುಟ್ಟಿದ್ದೀರಿ. ಆ ಯುವ ಆಟಗಾರ ಈಗ ‘ವಿರಾಟ್’ ಆಗಿ ಬೆಳೆದಿದ್ದು ನನಗೆ ಖುಷಿ ಕೊಟ್ಟಿದೆ. ಭಾರತೀಯ ಆಟಗಾರ ನನ್ನ ದಾಖಲೆ ಮುರಿದಿದ್ದು ನನಗೆ ಸಂತಸವಿದೆ. ವಿಶ್ವಕಪ್ ಸೆಮಿಫೈನಲ್‌ನಂಥಹ ದೊಡ್ಡ ಪಂದ್ಯದಲ್ಲಿ, ಅದೂ ನನ್ನ ತವರು ಮೈದಾನದಲ್ಲಿ ಇದು ದಾಖಲಾಗಿದ್ದು ನನ್ನ ಖುಷಿ ಹೆಚ್ಚಿಸಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

More News