ಹುಬ್ಬಳ್ಳಿ: ವಿಶ್ವಕಪ್ ಗೆ ಭಾರತ ತಲುಪಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿದೆ.
ಕಳೆದ ಹದಿನೈದು ದಿನದಲ್ಲಿ ಹು-ದಾ ಕಮಿಷನರೇಟ್ ವ್ಯಾಪ್ತಿಯಲ್ಲಿ 29 ಕೇಸ್ ದಾಖಲಾಗಿದ್ದು, 42 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಹುಬ್ಬಳ್ಳಿ ಧಾರವಾಡದ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಕಳೆದ ಹದಿನೈದು ದಿನದಲ್ಲಿ ಹು-ದಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಪ್ರಕರಣ ಸಂಬಂಧ 29 ಕೇಸ್ ದಾಖಲಿಸಿ 42 ಜನರನ್ನು ಅರೆಸ್ಟ್ ಮಾಡಿದ್ದಾರೆ. ಭಾರತ ಫೈನಲ್ ತಲುಪಿದೆ. ಹೀಗಾಗಿ ನಾವು ಮತ್ತಷ್ಟು ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದರು.

ಭಾರತ ಫೈನಲ್ ತಲುಪಿರುವ ಹಿನ್ನಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಜಾಸ್ತಿ ನಿಗಾವಹಿಸಲಾಗಿದೆ.
ಸೈಬರ್ ಬೇಸ್ ಆಧಾರದ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.. ಆ್ಯಪ್ ಗಳ ಮೇಲೆ ನಾವು ನಿಗಾ ಇಟ್ಟಿದ್ದು, ಬೆಟ್ಟಿಂಗ್ ಆಡೋ ತರಹದ ಆ್ಯಪ್ ಗಳ ಮೇಲೆ ಈಗಾಗಲೇ ಹೋಗಿ ಕೆಲವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದೀಪಾವಳಿ ದಿನದಂದೇ 731 ಜನರ ಬಂಧನ
ದೀಪಾವಳಿ ಹಿನ್ನಲೆ ಜೂಜಾಟ ಆಡ್ತಿದ್ದ 731 ಜನರ ಬಂಧಿಸಿ 12 ಲಕ್ಷ ವಶಕ್ಕೆ ಪಡೆಯಲಾಗಿದೆ. ಒಟ್ಟು ಹದಿನೈದು ದಿನಗಳಲ್ಲಿ 117 ಗ್ಯಾಂಬ್ಲಿಂಗ್ ಕೇಸ್ ನ್ನ ಹುಧಾ ಪೊಲೀಸರು ದಾಖಲಿಸಿದ್ದಾರೆ.




