ಕಾಂಟ್ರವರ್ಸಿ ಶೋ ಎಂದೇ ಪ್ರಚಲಿತವಾದ ರಿಯಾಲಿಟಿ ಶೋ ಬಿಗ್ಬಾಸ್ ಸದಾ ಮನೆಯ ಒಳಗಿನ ಜಗಳ, ವಿವಾದಗಳಿಂದಲೇ ಸುದ್ದಿ ಆಗ್ತಿತ್ತು. ಆದ್ರೆ ಈ ಬಾರಿ ಮನೆಯೊಳಗಣ ಗದ್ದಲ ಹೊರಗೂ ಅಸಮಧಾನ ಸೃಷ್ಟಿಸಿದೆ.
ಮೊದಲಿಗೆ ಬಿಗ್ಬಾಸ್ ಸ್ಪರ್ಧಿ ವರ್ತೂರು ಪ್ರಕಾಶ್ ಹುಲಿ ಉಗುರು ವಿಚಾರವಾಗಿ ಜೈಲು ಪಾಲಾದ ಬೆನ್ನಲ್ಲೇ ಹುಲಿ ಉಗುರಿನ ಜಾಡು ಸೆಲೆಬ್ರಿಟಿ, ರಾಜಕೀಯ ನಾಯಕರ ಮನೆಗೂ ತಲುಪಿತ್ತು. ಪೊಲೀಸ್ ನೋಟಿಸ್ ಗೆ ವಿಚಾರಣೆಗೆ ಹಾಜರಾಗ್ಬೇಕಾದಂತಹ ಪರಿಸ್ಥಿತಿ ಎದುರಾಯ್ತು. ಅದು ಮುಗಿಯುತ್ತಿದ್ದಂತೆ ಈಗ ಮತ್ತೊಬ್ಬ ಸ್ಪರ್ಧಿ ತನಿಷಾ ಕುಪ್ಪಂಡ ಜಾತಿ ನಿಂಧನೆ ಕುರಿತ ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೋವೊಂದು ಒಂದು ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಬಿಡುಗಡೆ ಕಂಡ ಬಿಗ್ ಬಾಸ್ ಅಭ್ಯರ್ಥಿ ತನಿಷಾ ಕುಪ್ಪಂಡ ಮಾತು ಎನ್ನಲಾದ ವೀಡಿಯೋ ಭಾರೀ ಸದ್ದು ಮಾಡ್ತಿದೆ. ಅದ್ರಲ್ಲಿ ನಟಿ ಮತ್ತೊಬ್ಬ ಸ್ಪರ್ಧಿ ಪ್ರತಾಪ್ ನೊಂದಿಗೆ ಸಂಭಾಷಣೆ ನಡೆಸುವ ಸಂದರ್ಭದಲ್ಲಿ ಯೇ
ಜಾತಿ ನಿಂಧನೆ ಮಾಡಿದ್ದಾರೆಂದು ದೂರಿ ನಟಿ ವಿರುದ್ಧ ಬೋವಿ ಸಮಾಜದ ಮಹಿಳಾ ಅಧ್ಯಕ್ಷೆ ಪದ್ಮ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಸಾಲು ಸಾಲು ದೂರು ದಾಖಲಾದ ಹಿನ್ನಲೆ ಬಿಗ್ ಬಾಸ್ ಮನೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಕಳೆದ ವಾರ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಬೋವಿ ಸಮಾಜದ ಮಹಿಳಾ ಅಧ್ಯಕ್ಷರಾದ ಪದ್ಮ ಅವರು ಬಿಗ್ ಬಾಸ್ ಅಭ್ಯರ್ಥಿ ತನಿಷಾ ಕುಪ್ಪಂಡ ಅವರು ಬೋವಿ ಸಮಾಜದ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರು ನೀಡಿದ್ದರು. ಅದರ ಸಂಬಂಧ ಎಸ್ಸಿ ಎಸ್ಟಿ ಕಾಯ್ದೆ ಅಡಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದೇವೆ. ಡಿಎಸ್ ಪಿ ಮಾಗಡಿ ಕೇಸ್ ಇನ್ವೆಸ್ಟಿಗೇಷನ್ ಆಫೀಸರ್ ಆಗಿದ್ದಾರೆ. ಪ್ರೋಮೋ ವೀಡಿಯೋ ಆಧಾರವಾಗಿಟ್ಟು ಬಿಗ್ ಬಾಸ್ ಮನೆಗೂ ನೋಟಿಸ್ ಕೊಡಲಾಗಿದೆ. ವರ್ಜಿನಲ್ ಫೂಟೇಜ್ ಕೊಡಬೇಕೆಂದು ನೋಟಿಸ್ ನೀಡಲಾಗಿದೆ. ವರ್ಜಿನಲ್ ಫೂಟೇಜ್ ಜೊತೆಗೆ ಪ್ರೋಮೋವನ್ನು ಕೂಡ ಎಫ್ ಎಸ್ ಎಲ್ ಗೆ ಕಳಿಸುತ್ತೇವೆ. ಅಲ್ಲಿಂದ ಏನು ವರದಿ ಬರುತ್ತೆ. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.




