ಯಾದಗಿರಿ : ಯಾದಗಿರಿಯಲ್ಲಿ ಯವಕನೋರ್ವ ತನ್ನ ಪೋಟೊ ಜತೆ ಯುವತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾನೆ ಎಂದು ಆರೋಪಿಸಿ ಆಕೆಯ ಮನೆಯವರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ವಿರುಪಾಪುರ ದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ಹುಡುಗಿ ಮನೆಯವರು ಯುವಕನೋರ್ವನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಈ ವಿಡಿಯೋವನ್ನು https://youtu.be/oyQzrsIZsdM ನಮ್ಮ ಯ್ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು.
ಯುವಕ ನಾನು ಪೋಸ್ಟ್ ಮಾಡಿಲ್ಲ, ಕೈ ಮುಗಿತೀನಿ, ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಟು ಬಿಡ್ರಿ ಎಂದು ಬೇಡಿಕೊಂಡರೂ ಯುವತಿ ಕಡೆಯವರು ಮನಬಂದಂತೆ ಆತನನ್ನು ಥಳಿಸಿದ್ದಾರೆ.

ಸ್ಥಳೀಯ ಗ್ರಾಮಸ್ಥರು ಆತನನ್ನು ಬಿಡಿಸಲು ಬಂದರೂ ಕೂಡ ಹಲ್ಲೆ ಮಾಡಿದ್ದಾರೆ. ಇದು ಕೇವಲ ಪೋಟೋ ಪೋಸ್ಟ್ ಮಾಡಿದ ವಿಚಾರವಲ್ಲ, ಬೇರೆಯೇ ಕಾರಣವಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಯುವಕನಿಗೆ ದೊಣ್ಣೆಯಿಂದ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹಾಪುರ ಪೊಲೀಸ್ ಠಾಣಾ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.




