ಬೆಂಗಳೂರು: ಭಾರತ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು ಎಂದು ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದೆ.
ವಿಶ್ವ ಕಪ್ ಸೋಲಿನ ಹಿನ್ನಲೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರುದ್ಧ ಚರ್ಚೆ ಶುರುವಿಟ್ಟಿದೆ. ಸಾಕಷ್ಟು ಮಂದಿ ಸೋಲಿನಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ನಟನ ಸ್ಟ್ರೇಟ್ಮೆಂಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ವಿಶ್ವಕಪ್ ಸೋಲಿನ ಬಳಿಕ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಅವರು,ನಾನು ಮತ್ತೆ ಹೇಳುತಿದ್ದೇನೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
https://x.com/ChetanAhimsa/status/1726266897312989697?s=20
ಇನ್ನು ನಟ ಚೇತನ್ ರ ಕಮೆಂಟ್ ಓದಿದ ಮಂದಿ ಪರ ವಿರೋಧ ಹೇಳಿಕೆ ನೀಡುತ್ತಿದ್ದಾರೆ. ನಟ ಚೇತನ್ ರನ್ನ ಮನೋರೋಗಿಗೆ ಹೋಲಿಕೆ ಮಾಡಿದ ಒಬ್ಬರು, ಸುಮ್ನೆ ಅಮೆರಿಕಕ್ಕೆ ಹೋಗಿಬಿಡು ಗುರು ಇರಬೇಡ ಇಲ್ಲಿ ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು ಯಾಕೆ ಅಸಂಬದ್ಧ ಹೇಳಿಕೆಗಳನ್ನ ನೀಡ್ತಿದ್ದೀರಿ ಎಂದು ಪ್ರಶ್ನೆ ಹಾಕುತ್ತಿದ್ದಾರೆ.
ಮೀಸಲಾತಿ ಟ್ವಿಟ್‌ಗೂ ಮುನ್ನವೊಂದು ಟ್ವೀಟ್ ಮಾಡಿದ್ದ ನಟ, ಭಾರತೀಯ ಕ್ರಿಕೆಟಿಗರು ಇಂದು ಚೆಂಡನ್ನು ಎಸೆಯಬಹುದು/ ಹಿಡಿಯಬಹುದು/ ಹೊಡೆಯಬಹುದು ಆದರೆ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡುವುದಿಲ್ಲ. 100+ ವರ್ಷಗಳ ಹಿಂದೆ, ಪಲ್ವಾಂಕರ್ ಬಾಲೂ- ಧಾರವಾಡ ಮೂಲದ ಬೌಲರ್ ಮತ್ತು ಭಾರತದ 1ನೇ ದಲಿತ ಕ್ರಿಕೆಟಿಗ- ಬಾಬಾಸಾಹೇಬ್ ಅವರ ಕಾರ್ಯಕರ್ತ ಮತ್ತು ಪರಿಚಯಸ್ಥರಾಗಿದ್ದರು.. ಭಾರತಕ್ಕೆ ಸಮಾಜವನ್ನು ಕಾಳಜಿ ವಹಿಸುವ ಕ್ರಿಕೆಟಿಗರು ಅಗತ್ಯವಿದೆ- ಹಣ ಮತ್ತು ವೈಭವವಲ್ಲ’ ಎಂದು ಅವರು ಬರೆದಿದ್ದರು. ಇದರ ಬೆನ್ನಲ್ಲೇ ಕ್ರಿಕೆಟ್ ಮೀಸಲಾತಿ ಕುರಿತ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.




