Insulting Chhatrapati Shivaji: ಛತ್ರಪತಿ ಶಿವಾಜಿಗೆ ಅವಮಾನ ಮಾಡಿ ಫೋಟೋ ಎಡಿಟ್: ಇಬ್ಬರು ಕಿಡಿಗೇಡಿಗಳ ಬಂಧನ

ಧಾರವಾಡ: ಸಾಮಾಜಿಕ ಜಾಲತಾಣದಲ್ಲಿ ಛತ್ರಪತಿ ಶಿವಾಜಿಗೆ ಅವಮಾನ ಮಾಡಿದ ಇಬ್ಬರು ಕಿಡಿಗೇಡಿಗಳನ್ನ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.

ರುಚಿಕ್‌ಸಾಬ್ ಮತ್ತು ಅಶ್ಫಕ್‌ಅಲಿ ಟಿಪ್ಪು ಸುಲ್ತಾನ್ ಕಾಲಿನಡಿ ಕುಳಿತು ಶಿವಾಜಿ ಬೇಡಿಕೊಳ್ಳುವ ಹಾಗೆ ಫೊಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಕಿಡಿಗೇಡಿಗಳು ಎಡಿಟ್ ಮಾಡಿದ ಫೋಟೋ ವನ್ನ ತಮ್ಮ ವಾಟ್ಸಪ್ ಮುಖ ಪುಟಕ್ಕೂ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಕೂಡಲೇ ಹಸರಂಬಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಗ್ರಾಮಸ್ಥರ ದೂರಿನ ಆಧಾರದ ಮೇಲೆ ತನಿಖೆಗೆ ಇಳಿದ ಪೊಲೀಸರು ರುಚಿಕ್‌ಸಾಬ್ ಮತ್ತು ಅಶ್ಫಕ್‌ಅಲಿ ಯನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ. ಕೃತ್ಯದ ಹಿಂದೆ ಅಶಾಂತಿ ಕದಡುವ ಸಂಚು ಏನಾದ್ರು‌ ಇತ್ತೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗ್ತಿದೆ.

More News