TWO CHIEF MINISTERS IN STATE: ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ ಕೆ ಶಿವಕುಮಾರ್ ಎಂದು ಹೇಳಿದ ಸಚಿವ ಮಂಕಾಳ್ ವೈದ್ಯ

ಬೆಂಗಳೂರು : ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಪೈಪೋಟಿ ಆರಂಭವಾಗಿದೆ. ಸಿಎಂ ಗಾದಿ ಖಾಲಿ ಇಲ್ಲದಿದ್ದರೂ ಮುಂದಿನ ಸಿಎಂ ತಾನು, ಇನ್ನೊಬ್ಬ ಎಂಬ ಕೂಗು ಆರಂಭವಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಸಿಎಂ ಅಂತ ಒಂದೆಡೆ ಅವರ ಆಪ್ತರು ಬಹಿರಂಗವಾಗಿ ಹೇಳಿಕೆ ನೀಡಿದರೆ, ಡಿಸಿಎಂ ಸಿಎಂ ಗಾದಿಗೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ, ಇನ್ನೊಂದೆಡೆ ದಲಿತ ಸಿಎಂ ಎಂದು ಡಾ. ಜಿ ಪರಮೇಶ್ವರ್ ರೆಡಿಯಾಗುತ್ತಿದ್ದಾರೆ.
ಇವೆಲ್ಲೆದರ ನಡುವೆ ಇಂದು ಸಚಿವ ಮಂಕಾಳ್ ವೈದ್ಯ, ವೇದಿಕೆಯ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಎದುರಿನಲ್ಲಿ ಸಿಎಂ ಡಿ ಕೆ ಶಿವಕುಮಾರ್ ಎಂದು ಹೇಳಿ ಅವರನ್ನು ಸ್ವಾಗತಿಸಿರುವುದು ಮಾತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಶ್ವ ಮೀನುಗಾರಕೆ ದಿನಾಚರಣೆಯನ್ನು ಇಂದು ಇಲಾಖೆ ವತಿಯಿಂದ ಆಚರಿಸಲಾಯಿತು.
ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ಪ್ರತಿಕ್ರಿಯೆ ಮಾತ್ರ ಕಿರುನಗೆಯಾಗಿತ್ತು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಇದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಡಿ ಕೆ ಶಿವಕುಮಾರ್ ಎಂದು ಸ್ವಾಗತ ಕೋರಿದರು. ನಂತರ ಮಾತನಾಡಿದ ಅವರು, ರಾಜ್ಯದಲ್ಲಿನ 85 ಲಕ್ಷ ಮೀನುಗಾರರಿಗೆ ಯಾವುದೇ ತೊಂದರೆ ಆಗಲು ಬಿಡಲ್ಲ, ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಹೇಳಿದರು.
ಮೊದಲ ಬಜೆಟ್‌ನಲ್ಲೇ ೨ ಲಕ್ಷ ಕಿ.ಲೀ. ಡಿಸೇಲ್ ಕೊಟ್ಟಿದ್ದೇವೆ. ಪ್ರತಿ ತಿಂಗಳು 300 ಲೀಟರ್ ಸೀಮೆಎಣ್ಣೆ ಕೊಡುತ್ತಿದ್ದೇವೆ, 370 ಕೋಟಿ ಬಜೆಟ್ ಮೀನುಗಾರಿಕೆ ಇಲಾಖೆಗೆ ಇಟ್ಟಿದ್ದೇವೆ, ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

More News