DK Shivakumar Case: ಡಿಕೆ ಶಿವಕುಮಾರ್ ಸಿಬಿಐ ಸಂಕಟ: ಪಾರು ಮಾಡಿದ ಸರ್ಕಾರ..!

ಬೆಂಗಳೂರು: ಆದಾಯ ಮೀರಿ ಆಸ್ತಿ ಕೇಸ್ ಗೆ ಸಂಬಂಧ ಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ಪ್ರಕರಣ ವಾಪಸ್ ಪಡೆಯಲು ಇಂದಿನ ಸಚಿವ ಸಂಪುಟ ತೀರ್ಮಾನ ಮಾಡಿದೆ.

ವಿಧಾನಸೌಧದಲ್ಲಿ ಇಂದು ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಡಿಕೆ ಶಿವಕುಮಾರ್ ಅವರ ಸಿಬಿಐ ಪ್ರಕರಣ ಚರ್ಚೆ ನಡೆಯಿತು. ಈ ವೇಳೆ ಡಿಕೆ ಶಿವಕುಮಾರ್ ಮೇಲಿನ ಕೇಸ್ ರಾಜಕೀಯ ಪ್ರೇರಿತ ಎಂಬ ನಿರ್ಣಯಕ್ಕೆ ಬಂದ ಸಂಪುಟದ ಸದಸ್ಯರು, ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನ ಹಿಂಪಡೆಯುವ ಬಗ್ಗೆ ಗೃಹ ಇಲಾಖೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ.

2019ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಅಂಶಗಳ ಕುರಿತು ಅಡ್ವೋಕೇಟ್ ಜನರಲ್ ಶಶಿ ಕಿರಣ ಶೆಟ್ಟಿ ಅವರ ಜೊತೆ ಚರ್ಚೆ ನಡೆಸಲಾಯ್ತು. ಈ ವೇಳೆ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದು ಸ್ಥಳೀಯ ಪೊಲೀಸ್ ಅಥವಾ ಲೋಕಾಯುಕ್ತಕ್ಕೆ ಹಸ್ತಾಂತರಿಸಲು ಎಜಿ ಶಶಿಕಿರಣ ಶೆಟ್ಟಿ ನವೆಂಬರ್ 21 ರಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎಜಿ ವರದಿ ಆಧರಿಸಿ ಸಚಿವ ಸಂಪುಟಕ್ಕೆ ಗೃಹ ಇಲಾಖೆ ಪ್ರಸ್ತಾಪ ಮಂಡಿಸಿದ್ದು, ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿಯವರಿಂದ ವರದಿ ಪಡೆದಿದ್ದು, ಕಾನೂನಾತ್ಮಕ ಅಂಶಗಳ ಮೇಲೆ ಚರ್ಚೆ ನಡೆಸಿದ ಸಂಪುಟ, ಗೃಹ ಸಚಿವ ಪರಮೇಶ್ವರ್ ಹಾಗೂ ಉಳಿದ ಸಚಿವರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಸಿಬಿಐಗೆ ನೀಡದಿರಲು ನಿರ್ಣಯಿಸಿದ್ದಾರೆ.

ಅಗತ್ಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. 2019ರಲ್ಲಿ ಪ್ರಕರಣ ಸಿಬಿಐಗೆ ನೀಡಲು ಅನುಮೋದನೆ ನೀಡಿದ್ದ ಅಂದಿನ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ, 25-09-2019ರಲ್ಲಿ ಸಿಬಿಐಗೆ ವಹಿಸಲು ಆದೇಶ ನೀಡಿತು. ಈ ವೇಳೆ ಸರ್ಕಾರದ ಆದೇಶ ಪ್ರಶ್ನೆ ಮಾಡಿ ಡಿಕೆ ಶಿವಕುಮಾರ್ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದ್ರೆ ಹೈಕೋರ್ಟ್ ಏಪ್ರಿಲ್ 23ರಲ್ಲಿ ರಿಟ್ ಅರ್ಜಿ ವಜಾಗೊಳಿಸಿತ್ತು. ರಿಟ್ ಅರ್ಜಿಯ ತೀರ್ಪಿನ ವಿರುದ್ಧ ರಿಟ್ ಅಪೀಲ್ ನ್ನ ಡಿಕೆ ಶಿವಕುಮಾರ್ ದಾಖಲಿಸಿದ್ದರು.

More News