ಬೆಂಗಳೂರು: ಟ್ರೈಲರ್ ಬಿಡುಗಡೆ ಮಾಡಿ ಬಿಜಿಎಂ, ದೃಶ್ಯಗಳ ಗುಣಮಟ್ಟದಿಂದಲೇ ಎಲ್ಲರ ಗಮನ ಸೆಳೆದಿರುವ ಕಂಗುವ’ ಚಿತ್ರ ಸಧ್ಯ ಸಿನಿ ದುನಿಯಾದಲ್ಲಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ತಮಿಳು ನಟ ಸೂರ್ಯ ನಾನಾ ಅವತಾರಗಳಲ್ಲಿ ಕಾಣಿಸುವ ಮೂಲಕ ಅಭಿಮಾನಿಗಳ ಹೃದಯವನ್ನ ಝಲ್ ಎನಿಸಿದೆ. ಇನ್ನು ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ದಿಶಾ ಪಟಾಣಿ ನಟಿಸಿದ್ದು, ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ 38 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಇತ್ತೀಚೆಗೆ ಅಷ್ಟೇ ಸುದ್ದಿ ಮಾಡಿತ್ತು. ನಿನ್ನೆ ಇದ್ದಕ್ಕಿದ್ದಂತೆ ಚಿತ್ರತಂಡ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ.
Dear Friends, well wishers & my #AnbaanaFans
— Suriya Sivakumar (@Suriya_offl) November 23, 2023
Heartfelt thanks for the outpouring ‘get well soon’ msgs.. feeling much better.. always grateful for all your love 🙂
ಸಿನಿಮಾದ ಶೂಟಿಂಗ್ ವೇಳೆ ನಟ ಸೂರ್ಯ ಅವರ ಭುಜದ ಮೇಲೆ ಕ್ಯಾಮೆರಾ ಬಿದ್ದಿದೆ ಎಂದು ಚಿತ್ರತಂಡ ತಿಳಿಸಿತ್ತು. ಕ್ಯಾಮರಾ ರಭಸವಾಗಿ ಬಿದ್ದ ಕಾರಣದಿಂದ ನಟ ಸೂರ್ಯ ಅವರಿಗೆ ಸಣ್ಣ ಗಾಯವಾಯ್ತು. ಹೀಗಾಗಿ ಶೂಟಿಂಗ್ ನ್ನ ಅರ್ಧಕ್ಕೆ ನಿಲ್ಲಿಸಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ ಬೆನ್ನಲ್ಲೇ ನಟನ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತು.
ಹೇಗಿದ್ದಾರೆ ಸೂರ್ಯ ಎಂಬ ಪ್ರಶ್ನೆಗೆ ಚಿತ್ರತಂಡ ಉತ್ತರಿಸುವುದೇ ಕಷ್ಟವಾಗಿ ಹೋಗಿತ್ತು. ಇದೀಗ ಸ್ವಲ್ಪ ಚೇತರಿಕೆ ಕಂಡಿರುವ ನಟ ತಮ್ಮ ಹೆಲ್ತ್ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.
ತಮ್ಮ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಆತ್ಮೀಯ ಸ್ನೇಹಿತರೇ, ಹಿತೈಷಿಗಳೇ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳೇ. ಬೇಗ ಗುಣಮುಖರಾಗಿ ಎಂಬ ನಿಮ್ಮ ಸಂದೇಶಗಳಿಗೆ ಧನ್ಯವಾದ. ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಕೃತಜ್ಞ’ ಎಂದು ಸೂರ್ಯ ತಿಳಿಸಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.




