ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಡಿಕೆ ಶಿವಕುಮಾರ್ ಗೆ ತಿಹಾರ್ ಜೈಲು ಸೇರಿದ್ದ ಪ್ರಕರಣ ವೊಂದಕ್ಕೆ ರಾಜ್ಯ ಸರ್ಕಾರ ತಿರುವು ನೀಡಿದ್ದು ಭಾರೀ ಚರ್ಚೆಗೆ ಗ್ರಾಮವಾಗಿದೆ.
ಡಿಸಿಎಂ ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರ ದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಡಿಕೆ ಶಿವಕುಮಾರ್ ಪ್ರಕರಣವನ್ನ ಸಿಬಿಐ ನಿಂದ ಹಿಂಪಡೆಯಲು ಕ್ಯಾಬಿನೇಟ್ ನಿರ್ಧಾರ ತೆಗೆದುಕೊಂಡಿದ್ದು, ಇದನ್ನ ಕೋರ್ಟ್ ಗೆ ತಿಳಿಸುತ್ತೇವೆ. ಮುಂದೆ ಸಿಬಿಐ ಏನ್ ಮಾಡುತ್ತೆ..? ಕೋರ್ಟ್ ಏನ್ ಮಾಡುತ್ತೆ..? ಆ ವ್ಯವಸ್ಥೆಗೆ ಬಿಟ್ಟ ವಿಚಾರ. ಹಾಗಾಗಿ ನಾವು ಅದನ್ನ ಪ್ರಿಡಿಕ್ಟ್ ಮಾಡೋಕೆ ಆಗಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.

ಮೊದಲೇ ಒಬ್ಬ ಎಂ ಎಲ್ ಎ ಅವರಿಗೆ ನಾವು ಯಾವುದೇ ಒಂದು ಪ್ರಕರಣದಲ್ಲಿ ಕೇಸ್ ಮಾಡಬೇಕಾದ್ರೆ ಸ್ಪೀಕರ್ ಪರ್ ಮಿಶನ್ ತಗೋಬೇಕು ಅನ್ನೋದು ವ್ಯವಸ್ಥೆಯಲ್ಲಿರೋ ನಿಯಮ. ಅದು ನಾನ್ ಮಾಡಿರೋದಲ್ಲ. ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ರಾಜಕೀಯ ಪ್ರೇರಿತ ಎಂದು ಕ್ಯಾಬಿನೆಟ್ ನಲ್ಲಿ ನಿರ್ಧರಿಸಲಾಗಿದೆ. ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲ ನಮಗೆ.ನಾವು ಕೋರ್ಟ್ ಗೆ ಇದನ್ನ ಸಬ್ ಮಿಟ್ ಮಾಡ್ತಿವಿ. ಮುಂದೆ ಏನಾಗುತ್ತೆ ಅಂತ ಗೊತ್ತಿಲ್ಲ ನಮಗೆ. ನಾವು ಕೋರ್ಟ್ ಗೆ ಇದನ್ನ ಸಬ್ ಮಿಟ್ ಮಾಡ್ತಿವಿ ಎಂದರು.
ವಿಪಕ್ಷ ಗಳ ಟೀಕೆ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪನವರು ಸಿಬಿಐಗೆ ಕೊಡಿ ಕೇಸ್ ಅಂತ ಓರಲ್ ಇನ್ಸ್ಟ್ರಕ್ಷನ್ಸ್ ಕೊಟ್ರಲ್ಲ ಆವಾಗ ರಾಜಕೀಯ ಪ್ರೇರಿತ ಆಗಿರಲಿಲ್ವಾ..? ಎಂದು ಪ್ರಶ್ನೆ ಹಾಕಿದರು. ನಾವು ಮಾಡಿರೋದು ಕಾನೂನಿನ ಚೌಕಟ್ಟಿನಲ್ಲಿ. ಅವತ್ತಿನ ಅಂದ್ರೆ ಬಿಜೆಪಿ ಸರ್ಕಾರದ ಅಡ್ವೊಕೇಟ್ ಜನರಲ್ಲೇ ಹೇಳಿದ್ದಾರೆ. ಅದನ್ನ ಮುಂದುವರೆದು ಈಗ ನಮ್ಮ ಅಡ್ವಕೇಟ್ ಜನರಲ್ ಕೂಡ ಅದನ್ನೇ ಹೇಳಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ
ನಮ್ಮ ಇತಿಮಿತಿಯಲ್ಲಿ ತೀರ್ಮಾನವನ್ನ ಮಾಡಲಾಗಿದೆ. ಮುಂದಿನದು ಕೋರ್ಟ್ ಗೆ ಬಿಟ್ಟದ್ದು ಎಂದು ಹೇಳಿದರು.




