ಬೆಂಗಳೂರು: ನಾವು ಕೇಸ್ ನ್ನ ವಿತ್ ಡ್ರಾ ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಫಾರಸು ಮಾಡಿರೋದನ್ನ ವಾಪಸ್ ಪಡೆದಿದ್ದೇವೆ ಅಷ್ಟೇ ಎಂದು ಡಿಕೆ ಶಿವಕುಮಾರ್ ಸಿಬಿಐ ಪ್ರಕರಣವನ್ನ ವಾಪಸ್ ಪಡೆದುದರ ಕುರಿತು ಸಿಎಂ ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.
ಡಿಕೆ ಶಿವಕುಮಾರ್ ಅಪರಾಧದಲ್ಲಿ ಸಿಎಂ ಶಾಮೀಲಾಗಲು ಹೊರಟಿದ್ದಾರೆಂಬ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮಗೂ ಅದಕ್ಕೂ ಏನು ಸಂಬಂಧ..? ಇದು ಸಚಿವ ಸಂಪುಟ ಸಭೆಯ ನಿರ್ಧಾರ. ಅಡ್ವೊಕೇಟ್ ಜನರಲ್ ಅಭಿಪ್ರಾಯ ಆಧರಿಸಿ ಶಿಫಾರಸು ವಾಪಸ್ ಪಡೆದಿದ್ದೇವೆ. ಯಡಿಯೂರಪ್ಪ ಕಾನೂನು ಪ್ರಕಾರ ಪ್ರಕರಣವನ್ನ ಶಿಫಾರಸು ಮಾಡಿಲ್ಲ. ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನೂ ಪಡೆದಿಲ್ಲ. ಅದಕ್ಕೂ ಮೊದಲೇ ಶಿಫಾರಸು ಮಾಡಿದ್ದಾರೆ. ಇದರ ಹಿಂದೆ ಯಾವ ಉದ್ದೇಶ ಇದೆ ಅನ್ನೋದು ಗೊತ್ತಾಗುತ್ತೆ ಎಂದು ದೂರಿದರು.
ಹಾಲಿ ಶಾಸಕರಾಗಿದ್ದವರಿಗೆ ಅನುಮತಿ ನೀಡಬೇಕಾಗಿರೋದು ಸ್ಪೀಕರ್. ಮಿಸ್ಟರ್ ಯಡಿಯೂರಪ್ಪ ಸ್ಪೀಕರ್ ಅನುಮತಿಯನ್ನೇ ಪಡೆಯದೆ ಶಿಫಾರಸು ಮಾಡಿದ್ದಾರೆ. ಇವರು ಕಾನೂನು ಪ್ರಕಾರ ಮಾಡಬೇಕಿತ್ತು ಅಲ್ಲವಾ ? ಯಡಿಯೂರಪ್ಪ ಕಾನೂನು ಹೋರಾಟ ಮಾಡಲಿ ಬೇಡ ಎಂದವರು ಯಾರು ? ಎಂದು ವ್ಯಂಗ್ಯ ಮಾಡಿದರು.

ಸಿಬಿಐ ಪತ್ರ ಬರೆದಿದಕ್ಕೆ ನಾವು ರೆಫರ್ ಮಾಡಿದ್ದು ಎಂದು ಬಿಎಸ್ ವೈ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಆಯ್ತು ಅವರು ಕಾನೂನು ಪ್ರಕಾರ ಮಾಡಬೇಕಲ್ವಾ ? ಅಭಿಪ್ರಾಯ ಪಡೆಯಲು ಅಡ್ವೋಕೇಟ್ ಜನರಲ್ ರನ್ನ ಕೇಳ್ತಾರೆ. ಅವರ ಒಪಿನಿಯನ್ ಬಂದೇ ಇರೋದಿಲ್ಲ. ಅಡ್ವೊಕೇಟ್ ಜನರಲ್ ರನ್ನ ಮಾಡಬೇಕೋ ಬೇಡವೋ ಎಂಬ ಲೀಗಲ್ ಒಪಿನಿಯನ್ ಕೇಳ್ತಾರೆ. ಅಭಿಪ್ರಾಯಕ್ಕೂ ಮೊದಲೇ ಯಾಕೆ ಯಡಿಯೂರಪ್ಪ ಮೌಖಿಕವಾಗಿ ಇಂಟ್ರಸ್ಟ್ ಇಟ್ಟುಕೊಂಡು ರೆಫರ್ ಮಾಡಿದ್ರು..? ಇವರು ಸ್ಪೀಕರ್ ಅನುಮತಿ ತೆಗೆದುಕೊಳ್ಳಲಿಲ್ಲ. ಅದಕ್ಕೆ ಕಾನೂನು ಉಲ್ಲಂಘಿಸಿದ್ದಾರೆ ಅಂತ ಹೇಳಿದ್ದೇವೆ. ನಾವು ಕ್ಯಾಬಿನೆಟ್, ಅಡ್ವೋಕೇಟ್ ಜನರಲ್ ಅಭಿಪ್ರಾಯ ತೆಗೆದುಕೊಂಡಿರೋದು. ಇವರು ಮೌಖಿಕ ಆದೇಶ ಕೊಟ್ಟಿದ್ರು ರೈಟಿಂಗ್ ಆದೇಶ ಕೊಟ್ಟಿರಲಿಲ್ಲ ಎಂದು ವಿವರಿಸಿದರು.




