ಬೆಂಗಳೂರು: ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರವರಿಗೆ ರಾಜೀನಾಮೆಗೆ ಒತ್ತಾಯಿಸಿರುವ ರಾಮಚಂದ್ರಪ್ಪನವರ ಹೇಳಿಕೆ ವಿಚಾರವಾಗಿ ಆಡಿಟರ್ ನಾಗರಾಜ್ ಯಲಚವಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.
ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡುವುದರ ಜೊತೆಗೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಸಮುದಾಯದ ಜನಾಂಗಕ್ಕೂ ಕೂಡ ಮೀಸಲಾತಿ ಸೌಲಭ್ಯ ದೊರಕಬೇಕೆಂದು ಅವರ ಆಶಯವಾಗಿತ್ತು. ಅದರೆ ವಿಚಾರವನ್ನು ರಾಮಚಂದ್ರಪ್ಪರು ತಿಳಿದುಕೊಳ್ಳದೆ ಡಿ.ಕೆ. ಶಿವಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಹೇಳಿಕೆಯನ್ನು ನೀಡಿದ್ದಾರೆ. ಯಾವುದೇ ಸಮಾಜದ ವ್ಯಕ್ತಿ ಜನಪ್ರತಿನಿಧಿ ಆದರೂ ಕೂಡ ಅವರುಗಳು ಅವರವರ ಜಾತಿಗೆ ಸಂಬಂಧಪಟ್ಟ ಆರ್ಥಿಕ ಸಾಮಾಜಿಕ ಹಾಗು ಶೈಕ್ಷಣಿಕ ಹಿಂದುಳಿದ ವರ್ಗ ಬಗ್ಗೆ ಕಾಳಜಿ ನೋಡಿಕೊಳ್ಳಬೇಕಾಗುತ್ತದೆ.
ಅದನ್ನು ಮರೆತು ಡಿ.ಕೆ ಶಿವಕುಮಾರ್ ಅವರು ರಾಜೀನಾಮೆ ನೀಡಿಬೇಕೆಂಬುದು ಸರಿಯಾದ ಮಾರ್ಗವಲ್ಲ, ರಾಜ್ಯ ಹಿಂದುಳಿದ ವರ್ಗದ ಆಯೋಗವು ನಡೆಸಿರುವ ಸಮೀಕ್ಷೆ ಕೇವಲ ಜಾತಿ ಗಣತಿಯ ಸರ್ವೆ ಅಲ್ಲ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿ ಸರ್ವೆ ಎಂದು ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಗಡೆ ಯವರು ತಿಳಿಸಿರುತ್ತಾರೆ. ಸಾಮಾಜಿಕ ಹಾಗೂ ಶೈಕ್ಷಣಿಕ ಜನಗಣತಿಯನ್ನು ಸರ್ಕಾರದ ಆದೇಶದ ಪ್ರಕಾರ 10 ವರ್ಷಕ್ಕೊಮ್ಮೆ ಜನಗಣತಿಯನ್ನು ಮಾಡಬೇಕೆಂದು ಆದೇಶವಿರುತ್ತದೆ. ಕಾಂತರಾಜ್ ಆಯೋಗದ ಜನಗಣತಿಯ ಸುಮಾರು 9 ವರ್ಷಗಳು ಕಳೆದು ಹೋಗಿರುತ್ತದೆ . ಕಾಂತರಾಜು ಆಯೋಗದ ಸಮಿತಿಯ ಸದಸ್ಯರು ಶೇಕಡಾ 75 ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯಗಳಾದ ಲಿಂಗಾಯಿತರು,ಒಕ್ಕಲಿಗರು, ಮುಸಲ್ಮಾನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಬ್ರಾಹ್ಮಣರು ಹಾಗೂ ವೈಶ್ಯ ಸಮುದಾಯಗಳ ಸದಸ್ಯರು ಇರುವುದಿಲ್ಲ . ನಮ್ಮ ಸಮಾಜವು ಯಾವುದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಬಾರದೆಂದು ನಮ್ಮ ಸಮುದಾಯದ ಜನಪ್ರತಿನಿಧಿಗಳು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳದ ಡಿ.ಕೆ. ಶಿವಕುಮಾರ್ ಅವರು ಎಲ್ಲಿಯೂ ನೀಡಿರುವುದಿಲ್ಲ. 50 ವರ್ಷಗಳಿಂದಲೂ ಕೂಡ ಮೀಸಲಾತಿಗೆ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ನಮ್ಮ ಸಮುದಾಯ ಯಾವತ್ತೂ ವಿರೋಧವನ್ನು ವ್ಯಕ್ತಪಡಿಸಿರುವುದಿಲ್ಲ . ಈ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಕೋವಿಡ್ 19 ಎಂಬ ಮಹಾ ಮರಿ ರೋಗವು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿರುತ್ತದೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ಮತ್ತೊಮ್ಮೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಜನಗಣತಿಯನ್ನು ಪ್ರತಿ ಮನೆಮನೆಗೂ ಹೋಗಿ ಸರ್ವೆ ಮಾಡುವುದರ ಮೂಲಕ ಸರ್ಕಾರಕ್ಕೆ ವರದಿ ನೀಡಲು ಆದೇಶಿಸಿಬೇಕೆಂದು ಈ ಮೂಲಕ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಆಡಿಟರ್ ನಾಗರಾಜ್ ಯಲಚವಾಡಿ ವರದಿ ನೀಡಲು ಒತ್ತಾಯಿಸಿದ್ದಾರೆ.




