IPL-2024: ಆರ್ ಸಿಬಿ ತಂಡಕ್ಕೆ ಸೇರಿಕೊಂಡ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್

ಬೆಂಗಳೂರು : ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಈ ಬಾರಿ ಐಪಿಎಲ್ ನಲ್ಲಿ ರಾಲ್ ಚಾಲಂಜರ್ಸ್ ಬೆಂಗಳೂರು ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್ ನಲ್ಲಿ ಅವರು ಮುಂಬೈ ಇಂಡಿಯನ್ಸ್ ಪರವಾಗಿ ಆಟವಾಡಿದ್ದರು.

https://twitter.com/RCBTweets/status/1729045064368955445?s=20

ಕ್ಯಾಮರೂನ್ ಗ್ರೀನ್ ಅವರು ಆರ್ ಸಿಬಿ ತಂಡವನ್ನು ಸೇರ್ಪಡೆಯಾವುದರೊಂದಿಗೆ ತಂಡದಲ್ಲಿ ವಿದೇಶಿಗರ ಸಂಖ್ಯೆ 5ಕ್ಕೇರಿದೆ. ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. ಇದರಿಂದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ತಂಡದಿಂದ ಬಿಟ್ಟುಕೊಟ್ಟಿತ್ತು.

ಕಳೆದ ಬಾರಿ ಡಿಸೆಂಬರ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ಬರೋಬ್ಬರಿ 17.50 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಅವರು ಮುಂಬೈ ಪರವಾಗಿ ಒಟ್ಟು 16 ಪಂದ್ಯಗಳಲ್ಲಿ ಆಟವಾಡಿದ್ದರು. ಒಂದು ಶತಕ ಮತ್ತು ಎರಜು ಅರ್ಧ ಶತಕಗಳೊಂದಿಗೆ ಅವರು ಒಟ್ಟು 542 ರನ್ ಗಳಿಸಿದ್ದರು.


ಆಂಡಿ ಪ್ಲವರ್ ತಂಡಕ್ಕೆ ಸೇರ್ಪಡೆಯಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ, ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿಮ್ಮನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ, ಚಿಯರ್ಸ್ ಎಂದು ಕ್ಯಾಮರೂನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದಾರೆ.
ತಂಡದಲ್ಲಿರುವ ಆಟಗಾರರು : ಫಾಫ್ ಡು ಪ್ಲೆಸಿಸ್, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್ ವೆಲ್, ರೀಸ್ ಟೋಪ್ಲಿ, ಮಹಿಪಾಲ್ ಲೋಮ್ರೋರ್, ರಜತ್ ಪಾಟಿದಾರ್. ವಿರಾಟ್ ಕೊಯ್ಲಿ, ಅನುಜ್ ರಾವತ್, ದಿನೇಶ್ ಕಾರ್ತೀಕ್, ಸುಯಶ್ ಪ್ರಭುದೇಸಾಯಿ, ಕರಣ್ ಶರ್ಮಾ, ಮನೋಜ್ ಭಾಂಡಗೆ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಹಿಮಾಂಶು ಶರ್ಮಾ, ರಾಜನ್ ಕುಮಾರ್, ವೈಶಾಕ್ ವಿಜಯ್ ಕುಮಾರ್.

More News