ನಿಗಮ ಮಂಡಳಿ ಸ್ಥಾನ ಹಂಚಿಕೆ, ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯವಿಲ್ಲ ;  ಸಚಿವ ಕೆ.ವೆಂಕಟೇಶ್

ಚಾಮರಾಜನಗರ: 28,ನವೆಂಬರ್ : ನಿಗಮ ಮಂಡಳಿ ಸ್ಥಾನ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಶಾಸಕರು ಹಾಗೂ ಕಾರ್ಯಕರ್ತರಿಗೆ ಕೊಡಬೇಕೆಂಬ ತೀರ್ಮಾನವಾಗಿದೆ, ಹೀಗಾಗಿ ನಮ್ಮಲ್ಲಿ ಯಾವುದೇ ಬಣ ಇಲ್ಲ ಎಂದು ಸಚಿವ ಕೆ.ವೆಂಕಟೇಶ್ ಚಾಮರಾಜನಗರದಲ್ಲಿ ತಿಳಿಸಿದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅವರವರು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ, ಅದನ್ನೇ ಬಣ ರಾಜಕೀಯ  ಎನ್ನುವುದು ಸರಿಯಲ್ಲ. ಶಾಸಕರಿಗೆ ಹಾಗೂ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ನೀಡಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು. ಇನ್ನು ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ವಿಚಾರ ಬಗ್ಗೆ ಮಾತನಾಡಿ, ನನ್ನನ್ನು ಸ್ಪರ್ಧೆ ಮಾಡಿ ಅಂತ ಯಾರೂ ಕೇಳಿಲ್ಲ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ   ಬಗ್ಗೆ ನನಗೆ ಗೊತ್ತಿಲ್ಲ. ನನನಗೆ ವಯಸ್ಸಾಗಿದೆ ಪಾರ್ಲಿಮೆಂಟ್ ಗೆ ಹೋಗೋಕೆ ಆಗಲ್ಲ, ನಾನೇನು ಟಿಕೆಟ್ ಆಕಾಂಕ್ಷಿನೂ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಸಣ್ಣ ವಿಚಾರಗಳನ್ನ ದೊಡ್ಡದು ಮಾಡೋದೆ ಅವರ ಕೆಲ್ಸ

ನಾವು ಅಧಿಕಾರದಲ್ಲಿ ಇದ್ದೇವೆ, ಅದಕ್ಕೆ ವಿರೋಧ ಪಕ್ಷದವರು ನಮ್ಮ ಸರ್ಕಾರದ ಮೇಲೆ ಭ್ರಷ್ಟಚಾರದ ಆರೋಪ ಮಾಡುತ್ತಿದ್ದಾರೆ.  ಸಣ್ಣ ವಿಚಾರಗಳನ್ನ ದೊಡ್ಡದು ಮಾಡೋದೆ ಅವರ ಕೆಲ್ಸ. ಜನಗಳಿಗೆ ತಪ್ಪು ಸಂದೇಶ ಕೊಡೋಕೆ ಪ್ರಯತ್ನ ಮಾಡ್ತಾರೆ. ಸಣ್ಣ ವಿಚಾರಗಳನ್ನ ದೊಡ್ಡದು ಮಾಡಲು ಮಾಧ್ಯಮ ಅವರಿಗೆ ಬೆಂಬಲ ನೀಡುತ್ತಿವೆ ಎಂದು ಮಾಧ್ಯಮಗಳ ವಿರುದ್ಧ  ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್  ಬೇಸರ ವ್ಯಕ್ತ ಪಡಿಸಿದರು.

More News