Pooja Gandhi Marriage: ಮಂತ್ರ ಮಾಂಗಲ್ಯದ ಮೂಲಕ ಹೊಸ ಬದುಕಿಗೆ ಕಾಲಿಟ್ಟ ಪೂಜಾ ಗಾಂಧಿ

ಬೆಂಗಳೂರು: ಸ್ಯಾಂಡಲ್ ವುಡ್ ನ ಮಳೆ ಹುಡುಗಿ ಪೂಜಾ ಗಾಂಧಿ ತಮ್ಮ ಬಹುಕಾಲದ ಗೆಳಯ ವಿಜಯ್‌ ರೊಂದಿಗೆ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ಪೂಜಾ ಗಾಂಧಿ ಒಂದೇ ಸಿನಿಮಾ ಮೂಲಕ ಫೇಮ್ ಗಿಟ್ಟಿಸಿಕೊಂಡರು.
ಇದೀಗ 40 ರ ಬೆಡಗಿ ಪೂಜಾ ಮದುವೆಯಾಗೋ ಮನಸ್ಸು ಮಾಡಿದ್ದು, ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲೀಕ ವಿಜಯ್‌ ಜೊತೆ 29 ನವೆಂಬರ್ 2023ರಂದು ಬೆಂಗಳೂರಿನ ಯಲಹಂಕದಲ್ಲಿ ಸರಳವಾಗಿ ದಾಂಪತ್ಯ ಜೀವಕ್ಕೆ ಕಾಲಿಟ್ಟರು.

ಸಿನಿಮಾ ತಾರೆಯರು ಅಂದ್ರೆ ಧಾಮ್ ಧೂಮ್ ಆಗಿ ವಿವಾಹ ಆಗುವುದನ್ನ ನೋಡಿದ್ದೇವೆ. ಆದರೆ ನಟಿ ಪೂಜಾಗಾಂಧಿ ಕನ್ನಡ ಕಲಿತು,ರಾಷ್ಟ್ರ ಕವಿ ಕುವೆಂಪು ಚಿಂತನೆಯ ಮಂತ್ರ ಮಾಂಗಲ್ಯ ಪದ್ಧತಿಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದು ವಿಶೇಷ..

ನಟಿ ಪೂಜಾ ಗಾಂಧಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಬಳಿಕ ಒಟ್ಟಿಗೆ ಬದುಕಲು ನಿರ್ಧರಿಸಿದ ಜೋಡಿ, ಮದುವೆ ಎಂಬ ಬಂಧದ ಮೂಲಕ ತಮ್ಮ ಪ್ರೇಮವನ್ನ ಇನ್ನಷ್ಟು ಗಟ್ಟಿಯಾಗಿಸಿಕೊಂಡಿದ್ದಾರೆ.

More News