NO BED KID DEATH: ನಿಮಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮೃತಪಟ್ಟ ಕಂದಮ್ಮ: ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾದ ಪೋಷಕರು ಮತ್ತು ಅಂಬ್ಯುಲೆನ್ಸ್ ಚಾಲಕರು

ಬೆಂಗಳೂರು : ಬೆಡ್ ಸಿಗದೇ ನಿಮ್ಹಾನ್ಸ್ ಅಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ ಸಂಬಂಧ ಇಂದು ಕುಟುಂಬದವರು ಹಾಗೂ ಆಂಬುಲೆನ್ಸ್ ಚಾಲಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪ್ರತಿಭಟನೆ ಮಾಡಲು ಸಜ್ಜಾಗಿರುವ ಪೋಷಕರು ಬಡವರ ಮಕ್ಕಳಿಗೆ ಒಂದು ನ್ಯಾಯ… VIP ಗಳಿಗೆ ಆಸ್ಪತ್ರೆಯಲ್ಲಿ ಬೇರೆಯದ್ದೇ ನ್ಯಾಯ, ದೊಡ್ಡ ದೊಡ್ಡವರು ಕಾಲ್ ಮಾಡಿದ್ರೆ ಬೆಡ್ ಸಿಗುತ್ತೆ, ಟ್ರೀಟ್ಮೆಂಟ್ ಮಾಡುತ್ತಾರೆ, ಬಡವರು ದೂರ ದೂರಿನಿಂದ ಬಂದ್ರೂ ಆಸ್ಪತ್ರೆಯ ಗೇಟ್ ಒಳಗೂ ಬಿಡಲ್ಲ, ಪ್ರಥಮ ಚಿಕಿತ್ಸೆಯೂ ಕೊಡಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಬಣ್ಣ ಬಣ್ಣದ ಕಾಗೆ ಹಾರಿಸುತ್ತಾರೆ ಎಂದು ಆಂಬ್ಯುಲೆನ್ಸ್ ಚಾಲಕರು ಕಿಡಿಕಾರಿದ್ದಾರೆ. ಸದ್ಯ ಸ್ಥಳೀಯ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ಕಳಿಸಿದ ನಿಮ್ಹಾನ್ಸ್ ವೈದ್ಯರು, ನಿಮಾನ್ಸ್ ಆಸ್ಪತ್ರೆ ವ್ಯಾಪ್ತಿಯ ಸಿದ್ದಾಪುರ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ರವಾನೆ, ಸಿದ್ದಾಪುರ ಪೊಲೀಸರಿಂದ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆಗೆ ರಿಪೋರ್ಟ್ ರವಾನೆ ಮಾಡಲಾಗಿದೆ.
ಇಂದು ಬೆಳಗ್ಗೆ ನಿಮ್ಹಾನ್ಸ್ ಅಸ್ಪತ್ರೆಗೆ ಭೇಟಿ ನೀಡಲಿರೊ ಗೋಣಿ ಬೀಡು ಪೊಲೀಸರು, ಆಸ್ಪತ್ರೆಯಿಂದ ಮಾಹಿತಿ ಕಲೆ ಹಾಕಿ, ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗುವುದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮಗುವಿನ ಮೃತದೇಹ ಹಸ್ತಾಂತರ ಮಾಡಲಾಗುವುದು.
ಮೃತದೇಹ ಸಿಕ್ಕ ಬಳಿಕ ಆಂಬ್ಯುಲೆನ್ಸ್ ಚಾಲಕರು ಹಾಗೂ ಮಗುವಿನ ಕುಟುಂಬದಿಂದ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಹಾಸನದಿಂದ ಜೀರೋ ಟ್ರಾಫಿಕ್ ನಲ್ಲಿ ಮಗುವನ್ನು ಕರೆತರಲಾಗಿತ್ತು. ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿಯೇ ಅಂಬುಲೆನ್ಸ್ ಅನ್ನು ನಿಲ್ಲಿಸಲಾಗಿತ್ತು. ಒಂದು ಘಂಟೆಗೂ ಅಧಿಕ ಕಾಲ ಆಂಬ್ಯೂಲೆನ್ಸ್ ನಲ್ಲೇ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು.
ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೇ ಬೇಜವಾಬ್ದಾರಿ ತೋರಿದ ನಿಮಾನ್ಸ್ ಆಸ್ಪತ್ರೆಯ ವೈದ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ವರ್ಷದ ಮಗು, 10 ಅಡಿ ಮೇಲಿಂದ ಜಾರಿ ಕೆಳಗೆ ಬಿದ್ದಿತ್ತು, ತಲೆಗೆ ತೀವ್ರವಾಗಿ ಗಾಯಗೊಂಡು ಮಗು ಅಸ್ವಸ್ಥಗೊಂಡಿತ್ತು.

ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದ ಪೋಷಕರು, ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಗೆ ಹೋಗುವಂತೆ ಸೂಚಿಸಿದ್ದರು. ಅದರಂತೆಯೇ ಝೀರೋ ಟ್ರಾಫಿಕ್ ನಲ್ಲಿ ಮಗುವನ್ನು ಕರೆದುಕೊಂಡು ಬರಲಾಗಿತ್ತು. ಬೆಡ್ ಕಾಯ್ದಿರಿಸುವಿಕೆಗಾಗಿ ನಿಮಾನ್ಸ್ ಆಡಳಿತ ಮಂಡಳಿಗೆ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ಈಗ ಮಗುವಿಗೆ ಬೆಡ್ ಇಲ್ಲ ಎಂದ ನಿಮಾನ್ಸ್ ಆಡಳಿತ ಮಂಡಳಿ ಚಿಕಿತ್ಸೆ ನೀಡಲು ನಿರಾಕರಿಸಿತ್ತು. ಸುಮಾರು ಒಂದೂವರೆ ಗಂಟೆಯ ನಂತರ ಬೆಡ್ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿತ್ತು. ಇದರಿಂದ ಪೋಷಕರ ಆಕ್ರೋಶ ಇನ್ನಷ್ಟು ಹೆಜ್ಜಾಗಿದ್ದು, ಇಂದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

More News